Racial Discrimination : ಆ ಕ್ಲಬ್ ನಲ್ಲಿ ಕಪ್ಪು ವರ್ಣೀಯರಿಗೆ ಇಲ್ವಂತೆ ಜಾಗ..?
ವರ್ಣಬೇಧ ನೀತಿಗೆ ಕ್ರಿಕೆಟ್ ವಲಯ ಕೂಡ ಅತೀತವಲ್ಲ. ಇಂಗ್ಲೆಂಡ್ ನಲ್ಲಿನ ಮಿಡ್ಲ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ನಲ್ಲಿ ಕಪ್ಪುವರ್ಣೀಯರಿಗೆ ಸ್ಥಾನವಿಲ್ಲದಂತೆ ಮಾಡುತ್ತಿದ್ದಾರೆ ಎಂದು ಹ್ಯಾಂಪ್ಶೈರ್ ಮಾಜಿ ಕ್ರಿಕೆಟಿಗ ಜಾನ್ ಹೋಲ್ಡರ್ ಆರೋಪಿಸಿದ್ದಾರೆ.
ದಿ ಮಿರರ್ಗೆ ನೀಡಿದ ಸಂದರ್ಶನದಲ್ಲಿ ಹೋಲ್ಡರ್, ಮಿಡ್ಲ್ಸೆಕ್ಸ್ನಲ್ಲಿ ನಡೆಯುತ್ತಿರುವ ದೌರ್ಜನ್ಯ ಬಗ್ಗೆ ವಿವರಿಸಿದ್ದಾರೆ. Racial Discrimination John Holder saaksha tv
ಮಿಡ್ಲ್ಸೆಕ್ಸ್ ಅಧ್ಯಕ್ಷ ಮೈಕ್ ಓ’ಫಾರೆಲ್ ಅವರ ಕ್ಲಬ್ನಲ್ಲಿ ಕಪ್ಪು ಕ್ರಿಕೆಟಿಗರಿಗೆ ಅವಕಾಶವಿಲ್ಲ. ಅವರು ಇಡೀ ಕ್ಲಬ್ ಅನ್ನು ಶ್ವೇತ ವರ್ಣ ಕ್ರಿಕೆಟಿಗರಿಂದ ತುಂಬಲು ಬಯಸುತ್ತಿದ್ದಾರೆ.
ಆ ಕ್ಲಬ್ ನಲ್ಲಿ ಈಗ ಹೆಚ್ಚಾಗಿ ಶ್ವೇತ ವರ್ಣೀಯರೇ ಹೆಚ್ಚಾಗಿದ್ದಾರೆ. ಯಾಕೆ ಇಂಥ ತಾರತಮ್ಯ.. ಕರಿಯರು ಮಾಡಿದ ಪಾಪ ಏನು..” ಎಂದು ಹೋಲ್ಡರ್ ಅಸಹನೆ ವ್ಯಕ್ತಪಡಿಸಿದ್ದಾರೆ.
ಮಿಡ್ಲ್ಸೆಕ್ಸ್ನ ಅಧ್ಯಕ್ಷ ಮೈಕ್ ಓ’ಫಾರೆಲ್ ನೀಡಿದ ಹೇಳಿಕೆಯು ಅತ್ಯಂತ ಕೆಟ್ಟದಾಗಿದೆ. ನಾನು 1960 ರಲ್ಲಿ 15 ನೇ ವಯಸ್ಸಿನಲ್ಲಿ ಇಂಗ್ಲೆಂಡ್ಗೆ ಬಂದಿಳಿದಾಗ, ನಾನು ಇದೇ ರೀತಿಯ ತಾರತಮ್ಯವನ್ನು ಎದುರಿಸಿದ್ದೆ.
ನಾನು ಫುಟ್ಬಾಲ್ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯೊಂದಿಗೆ ಇಂಗ್ಲೆಂಡ್ ಗೆ ಬಂದಿದ್ದೆ. ಆದರೆ ಅಲ್ಲಿ ಕಪ್ಪು ವರ್ಣೀಯರು ಆಟದಲ್ಲಿ ಪಾಲ್ಗೊಂಡರೆ ಇಡೀ ಆಟವೇ ಹಾಳಾಗುತ್ತದೆ.
ಪಂದ್ಯಗಳು ಸೋಲುವ ಸಾಧ್ಯತೆಗಳು ಹೆಚ್ಚು ಎಂದು ಪ್ರಚಾರ ಮಾಡಿದ್ದರು. ಆದ್ರೆ ಇಂಗ್ಲೆಂಡ್ ಫುಟ್ ಬಾಲ್ ಈಗ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಕಾಲ ಬದಲಾದಂತೆ ಫುಟ್ ಬಾಲ್ ಅನ್ನು ಕೂಡ ಪೂರ್ತಿಯಾಗಿ ಬದಲಿಸಿದೆ. ಈಗ ಫುಟ್ ಬಾಲ್ ಕ್ಲಬ್ ಗಳಲ್ಲಿ ಕಪ್ಪುವರ್ಣೀಯರೇ ಹೆಚ್ಚಾಗಿದ್ದಾರೆ ಎಂದು ಹೋಲ್ಡರ್ ಹೇಳಿದ್ದಾರೆ.