‘ಬಿಜೆಪಿಯನ್ನು ಎದುರಿಸಲು ಹೆದರುವವರು ಪಕ್ಷ ಬಿಡಲಿ , ಧೈರ್ಯಶಾಲಿಗಳು ಪಕ್ಷ ಸೇರಲಿ’ : ರಾಹುಲ್ ಗಾಂಧಿ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ.. ಆಗಾಗ ಅನೇಕ ವಿಚಾರಗಳನ್ನ ಹಂಚಿಕೊಳ್ತಾ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.. ಇದೀಗ ವಾಸ್ತವ ಮತ್ತು ಬಿಜೆಪಿಯನ್ನು ಎದುರಿಸಲು ಹೆದರುವವರು ಪಕ್ಷವನ್ನು ತೊರೆಯಬಹುದು. ಆದರೆ ಕಾಂಗ್ರೆಸ್ ಹೊರಗಿನ ನಿರ್ಭೀತ ನಾಯಕರನ್ನು ಪಕ್ಷದೊಳಗೆ ಕರೆತರಬೇಕು,ಎಂದು ಹೇಳಿದ್ದಾರೆ.
ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು – VIDEO VIRAL
ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಪಕ್ಷದ ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಯಪಟ್ಟವರೆಲ್ಲ ಪಕ್ಷ ತೊರೆದಿದ್ದಾರೆ ಎಂದು ಹೇಳಿದರು. ಹೆದರಿಕೆ ಇಲ್ಲದ ಅನೇಕರಿದ್ದಾರೆ. ಆದರೆ ಅವರು ಕಾಂಗ್ರೆಸ್ ಹೊರಗೆ ಇದ್ದಾರೆ. ಇವರೆಲ್ಲ ನಮ್ಮವರಾಗಬೇಕು. ಅವರನ್ನು ಒಳಗೆ ಕರೆತನ್ನಿ. ನಮ್ಮ ಪಕ್ಷದೊಳಗೆ ಭಯಭೀತರಾಗಿರುವವರನ್ನು ಹೊರಹಾಕಬೇಕು ಎಂದು ತಿಳಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಪರೋಕ್ಷವಾಗಿ ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.