ನವದೆಹಲಿ: ರಾಹುಲ್ ಗಾಂಧಿ (Rahul Gandhi) ದ್ವಿಪೌರತ್ವ (Dual Citizenship) ವಿಷಯ ಪರಿಶೀಲನೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ರಾಹುಲ್ ಬ್ರಿಟನ್ ಪ್ರಜೆಯಾಗಿರುವ ಕಾರಣ ಅವರ ಭಾರತದ ಪೌರತ್ವ ರದ್ದು ಮಾಡಬೇಕೆಂದು ಕೋರಿ ಕರ್ನಾಟಕದ (Karnataka) ಶಿಶಿರ್ ವಿಘ್ನೇಷ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚಿಸಿತ್ತು.
ಕಾಂಗ್ರೆಸ್‌ನ (Congress) ರಾಹುಲ್ ಗಾಂಧಿ ಅವರ ದ್ವಿಪೌರತ್ವದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.