ಮಧ್ಯಪ್ರದೇಶದ ಪದ್ಮರ್ಹಿ ಗಿರಿಧಾಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ತರಬೇತಿ ಶಿಬಿರದಲ್ಲಿ ವಿಶೇಷ ಘಟನೆ ನಡೆದಿದೆ. ತರಬೇತಿಗೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 10 ಪುಷ್‌ಅಪ್‌ಗಳ ಪನಿಷ್ಮೆಂಟ್ ವಿಧಿಸಲಾಗಿದೆ.
ಕಾಂಗ್ರೆಸ್ ತರಬೇತಿ ವಿಭಾಗದ ಮುಖ್ಯಸ್ಥ ಸಚಿನ್ ರಾವ್ ಮಾಹಿತಿ ನೀಡಿದ್ದು, ನಮ್ಮ ತರಬೇತಿ ಶಿಬಿರದಲ್ಲಿ ಶಿಸ್ತು ಅತ್ಯಂತ ಮುಖ್ಯ. ಯಾರು ತಡವಾಗಿ ಬಂದರೂ ಅಥವಾ ನಿಯಮ ಉಲ್ಲಂಘಿಸಿದರೂ ಪನಿಷ್ಮೆಂಟ್ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಸ್ವತಃ ಪನಿಷ್ಮೆಂಟ್ ಏನು ಎಂದು ಕೇಳಿದಾಗ, ಅವರಿಗೆ 10 ಪುಷ್‌ಅಪ್ ಮಾಡಬೇಕೆಂದು ತಿಳಿಸಲಾಯಿತು.
ರಾಹುಲ್ ಗಾಂಧಿ ಯಾವ ಹಿಂಜರಿಕೆ ಇಲ್ಲದೆ ಜಿಲ್ಲಾ ಅಧ್ಯಕ್ಷರ ಮುಂದೆ ನೇರವಾಗಿ 10 ಪುಷ್‌ಅಪ್‌ಗಳನ್ನು ಮಾಡಿದ್ದು, ಶಿಬಿರದಲ್ಲಿದ್ದವರ ಗಮನ ಸೆಳೆದಿದೆ. ಈ ಘಟನೆ ಶಿಬಿರದ ನಿಯಮಗಳಿಗೆ ರಾಹುಲ್ ಗಾಂಧಿಯೂ ಹೊರತಾಗಿಲ್ಲ ಎಂಬ ಸಂದೇಶ ನೀಡಿದೆ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.







