ADVERTISEMENT
Sunday, November 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ರಾಹುಲ್ ಗಾಂಧಿ ಕಾಲೆಳೆದ ಪ್ರಧಾನಿ ಮೋದಿ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Author2 by Author2
July 2, 2024
in National, ದೇಶ - ವಿದೇಶ, ರಾಜಕೀಯ
Share on FacebookShare on TwitterShare on WhatsappShare on Telegram

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾಲೆಳೆದು ಗೇಲಿ ಮಾಡಿದ್ದಾರೆ.

ಜುಲೈ 1 ರಂದು ಜನರು 8,500 ರೂ. ಬಂದಿದೆಯೋ ಇಲ್ವೋ ಅಂತಾ ಬ್ಯಾಂಕ್ ಖಾತೆ ಚೆಕ್ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಲೇವಡಿ ಮಾಡಿದ್ದಾರೆ.

Related posts

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

November 9, 2025
ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

November 9, 2025

ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ ವಿಪಕ್ಷಗಳ ಕಾಲೆಳೆದಿದ್ದಾರೆ. ಇದು ಕಾಂಗ್ರೆಸ್‍ ನ ಸುಳ್ಳಿನ ಸಂತೆ. ಅವರ ಸುಳ್ಳಿಗೆ ಇದೊಂದು ದೊಡ್ಡ ಉದಾಹರಣೆ. ಈ ಸುಳ್ಳಿನಿಂದ ಮಹಿಳೆಯರಿಗೆ ತುಂಬಾ ನೋವಾಗಿದೆ. ಮುಂದೆ ಮಹಿಳೆಯರೇ ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮೀಸಲಾತಿ ವಿರೋಧಿಯಾಗಿಯೇ ಮಾತನಾಡುತ್ತಿತ್ತು. ಅಂದು ರಾಜ್ಯದ ಎಲ್ಲ ಸಿಎಂಗಳಿಗೆ ಪತ್ರ ಬರೆದು ನೆಹರು ಮೀಸಲಾತಿ ವಿರೋಧಿಸಿದ್ದರು. ಮಂಡಲ ಕಮಿಷನ್ ವರದಿ ತಡೆ ಹಿಡಿಯಲಾಗಿತ್ತು. ರಾಜೀವ್ ಗಾಂಧಿ ವಿರೋಧ ಪಕ್ಷದಲ್ಲಿದ್ದಾಗ ಮೀಸಲಾತಿ ವಿರುದ್ಧ ಮಾತನಾಡಿದ್ದರು. ಸಂಸತ್ ನ ರೆಕಾರ್ಡ್ ನಲ್ಲಿ ಕೂಡ ಈ ದಾಖಲೆ ಈಗಲೂ ಇದೆ ಎಂದು ವಾಗ್ದಾಳಿ ನಡೆಸಿದರು.

ಪರಿಸ್ಥಿತಿಯ ಐವತ್ತನೇ ವರ್ಷ. ಬಾಬು ಜಗಜೀವನ್ ರಾವ್ ಅವರಿಗೆ ಅವರ ಹಕ್ಕು ನೀಡಲಿಲ್ಲ. ತುರ್ತು ಪರಿಸ್ಥಿತಿ ಬಳಿಕ ಜಗಜೀವನ್ ರಾವ್ ಪ್ರಧಾನಿಯಾಗಬೇಕಿತ್ತು. ರಾವ್ ಪ್ರಧಾನಿಯಾಗಬಾರದು ಎಂದು ಇಂದಿರಾಗಾಂಧಿ ಹೇಳಿದ್ದರು. ಚೌಧರಿ ಚರಣ್ ಸಿಂಗ್ ವಿಚಾರದಲ್ಲಿ ಹೀಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಅಧಿಕಾರಕ್ಕಾಗಿ ಸರ್ವಾಧಿಕಾರಿ ಶಾಸನ ಹೇರಲಾಯಿತು. ಕಾಂಗ್ರೆಸ್ (Congress) ಕ್ರೂರತೆಯ ಎಲ್ಲೆ ಮೀರಿ ಹೋಗಿತ್ತು. ಸರ್ಕಾರ ಬೀಳಿಸುವುದು, ಮಾಧ್ಯಮ ನಿಯಂತ್ರಣ ಮೂಲಕ ಸಂವಿಧಾನದ ವಿರುದ್ಧ ಕಾಂಗ್ರೆಸ್ ನಡೆದುಕೊಂಡಿದೆ. ದಲಿತರು, ಹಿಂದುಳಿದ ಜನರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಇದೇ ಕಾರಣಕ್ಕಾಗಿ ಅಂಬೇಡ್ಕರ್ ಅವರು ನೆಹರು ಸಂಪುಟದಿಂದ ರಾಜೀನಾಮೆ ನೀಡಿ ಹೊರ ಬಂದರು.

ಅಂಬೇಡ್ಕರ್ ರಾಜೀನಾಮೆ ನೀಡುವ ವೇಳೆ ಕಾರಣ ನೀಡಿದ್ದರು. ಆ ಕಾರಣ ಕಾಂಗ್ರೆಸ್ ಚರಿತ್ರೆ ಹೇಳುತ್ತದೆ. ಎಸ್‍ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಬಳಿಕ ನೆಹರು ಅಂಬೇಡ್ಕರ್ ರಾಜಕೀಯ ಜೀವನ ಮುಗಿಸಲು ಎಲ್ಲ ಪ್ರಯತ್ನ ಮಾಡಿದರು. ಷಡ್ಯಂತ್ರ ಮಾಡಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಆ ಸೋಲಿಯ ವಿಜಯೋತ್ಸವ ಮಾಡಲಾಯಿತು, ಇದು ಒಂದು ಪತ್ರದಲ್ಲಿ ದಾಖಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

131 ವರ್ಷ ಹಿಂದೆ ಸ್ವಾಮಿ ವಿವೇಕಾನಂದ ಹೇಳಿದ್ದರು. ಇಡೀ ವಿಶ್ವಕ್ಕೆ ಸಹಿಷ್ಣುತೆ ಕಲಿಸಿದ ಧರ್ಮ ನನ್ನದು ಎಂದು. ಹಿಂದೂ ಸಹಿಷ್ಣುತೆಯ ಧರ್ಮ, ಎಲ್ಲರೂ ತನ್ನವರು ಎಂದು ಜೀವಿಸುವ ಧರ್ಮ ಅದಕ್ಕಾಗಿ ಭಾರತ ವೈವಿಧ್ಯಮಯವಾಗಿದೆ. ಆದರೆ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ, ಗಂಭೀರ ಷಡ್ಯಂತ್ರ ಮಾಡಲಾಗುತ್ತಿದೆ. ಹಿಂದೂ ಹಿಂಸಕರು ಎಂದು ಹೇಳಿದ್ದಾರೆ. ಇದು ನಿಮ್ಮ ಆಲೋಚನೆಯಾ?. ಈ ದೇಶ ಇದನ್ನು ಎಂದಿಗೂ ಮರೆಯುವುದಿಲ್ಲ. ಶಕ್ತಿಯ ವಿನಾಶದ ಬಗ್ಗೆ ಮಾತನಾಡುತ್ತಾರೆ. ಹಿಂದೂ ಆತಂಕವಾದ ಶಬ್ದ ಬಳಕೆಯ ಪ್ರಯತ್ನ ಮಾಡಲಾಗಿದೆ. ಇವಿಎಂ, ಸಂವಿಧಾನ, ಮೀಸಲಾತಿ ಎಲ್ಲದರಲ್ಲೂ ಸುಳ್ಳು. ಇದಕ್ಕೂ ಮೊದಲು ಎಲ್‍ಐಸಿ, ಬಿಇಎಲ್, ರಫೇಲ್ ವಿಚಾರದಲ್ಲೂ ಸುಳ್ಳು ಹೇಳಿದರು. ಸೋಮವಾರ ಅಗ್ನಿವೀರ್ ವಿಚಾರದಲ್ಲಿ ಸದನದಲ್ಲಿ ಸುಳ್ಳು ಹೇಳಲಾಯಿತು. ಕನಿಷ್ಠ ಬೆಂಬಲ ಬೆಲೆ (MSP) ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಸದನದಲ್ಲಿ ಹೇಳುವ ಸುಳ್ಳು, ಅದರ ಗೌರವಕ್ಕೆ ಧಕ್ಕೆ ತಂದಿದೆ ಎಂದು ರಾಹುಲ್ ಗಾಂಧಿಯನ್ನು (Rahul Gandhi) ಟಾರ್ಗೆಟ್ ಮಾಡಿದರು ಎಂದು ಗುಡುಗಿದ್ದಾರೆ.

Tags: Rahul Gandhi is the Prime Minister Modi
ShareTweetSendShare
Join us on:

Related Posts

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಚುನಾವಣಾ ಅಕ್ರಮ: ಕಾಂಗ್ರೆಸ್ ಮತದಾರರನ್ನೇ ಗುರುತಿಸಿ ಮತಗಳನ್ನು ಶಿಫ್ಟ್ ಮಾಡಲಾಗಿದೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

by Shwetha
November 9, 2025
0

ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್‌ಗೆ ಮತ ಹಾಕುವ ಮತದಾರರನ್ನು ವ್ಯವಸ್ಥಿತವಾಗಿ ಗುರುತಿಸಿ, ಅವರ ಮತಗಳನ್ನು ಅಕ್ರಮವಾಗಿ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡುವ ಮೂಲಕ...

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

by Shwetha
November 9, 2025
0

"ನಾನು ಪುಣೆಯವಳು, ಆದರೆ ಬಿಹಾರದ ಚುನಾವಣೆಗಾಗಿ ಮತ ಚಲಾಯಿಸಿದ್ದೇನೆ," ಎಂಬರ್ಥದ ಯುವತಿಯೊಬ್ಬಳ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಲೋಕಸಭೆ...

ಸಿದ್ದು ಕೆಳಗಿಳಿಸಿದರೆ ಕಾಂಗ್ರೆಸ್ ಖತಂ: ಹೈಕಮಾಂಡ್‌ಗೆ ವರ್ತೂರು ಪ್ರಕಾಶ್ ಖಡಕ್ ವಾರ್ನಿಂಗ್!;ಕಮಲ ನಾಯಕನ ಸಿದ್ದು ಪ್ರೇಮ!

ಸಿದ್ದು ಕೆಳಗಿಳಿಸಿದರೆ ಕಾಂಗ್ರೆಸ್ ಖತಂ: ಹೈಕಮಾಂಡ್‌ಗೆ ವರ್ತೂರು ಪ್ರಕಾಶ್ ಖಡಕ್ ವಾರ್ನಿಂಗ್!;ಕಮಲ ನಾಯಕನ ಸಿದ್ದು ಪ್ರೇಮ!

by Shwetha
November 9, 2025
0

ಕೋಲಾರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿರುವಾಗಲೇ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ...

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

by Shwetha
November 9, 2025
0

ಪಾಟ್ನಾ: "ಕ್ರಿಕೆಟ್ ಬ್ಯಾಟ್ ಅನ್ನು ಸರಿಯಾಗಿ ಹಿಡಿಯಲು ಬಾರದ ವ್ಯಕ್ತಿಯೇ ಇಂದು ಇಡೀ ಕ್ರಿಕೆಟ್ ಜಗತ್ತನ್ನು ಆಳುತ್ತಿದ್ದಾರೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

ಸಂಪುಟ ಸರ್ಜರಿಗೆ ಸಿದ್ದು ಸಿದ್ಧತೆ: ‘ಗುಜರಾತ್ ಮಾಡೆಲ್’ ಬಾಂಬ್ ಸಿಡಿಸಿದ ಡಿಕೆಶಿ ಬಣ!

ಸಂಪುಟ ಸರ್ಜರಿಗೆ ಸಿದ್ದು ಸಿದ್ಧತೆ: ‘ಗುಜರಾತ್ ಮಾಡೆಲ್’ ಬಾಂಬ್ ಸಿಡಿಸಿದ ಡಿಕೆಶಿ ಬಣ!

by Shwetha
November 9, 2025
0

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷಗಳ ಅಧಿಕಾರಾವಧಿ ಸಮೀಪಿಸುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟಕ್ಕೆ ದೊಡ್ಡ ಮಟ್ಟದ ಸರ್ಜರಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram