ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ಸಾಥ್ ನೀಡಿ : ರಾಹುಲ್ ಗಾಂಧಿ..!

1 min read

ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ಸಾಥ್ ನೀಡಿ : ರಾಹುಲ್ ಗಾಂಧಿ..!

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕಾಯ್ದೆಗಳ ಬಗೆಗಿನ ನ್ಯೂನತೆಗಳನ್ನ ಸಸರ್ಕಾರಕ್ಕೆ ತಿಳಿಸಲು ನಿಮ್ಮ ಸಹಕಾರ ಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗೆ ಸಂಬಂಧಪಟ್ಟಂತೆ. ಅದರಲ್ಲಿರುವ ವಾಸ್ತವಾಂಶಗಳು, ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ವಿಷಯಗಳನ್ನು ಹೊತ್ತ ಕೈಪಿಡಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಧಾರವಾಡದಲ್ಲಿ ಭೀಕರ ಅಪಘಾತದಲ್ಲಿ 13 ಮಂದಿ ಸಾವು: ಪ್ರಕರಣ ಸಂಬಂಧ ಸಂತಾಪ ಸೂಚಿಸಿದ ಮೋದಿ

ನೂತನ ಕೃಷಿ ಕಾಯ್ದೆಯಲ್ಲಿರುವ ನ್ಯೂನತೆಗಳೇನೇನು ಎಂದು ಹೇಳಿ ಅದರಿಂದ ರೈತರಿಗೆ ಏನು ತೊಂದರೆಯಿದೆ ಎಂದು ತಿಳಿಸುವ ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೆಹಲಿ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರ ನಿವಾಸಕ್ಕೆ ತೆರಳಿ ಮೂರು ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಿದ್ದಾರೆ. ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ, ಆದರೆ ಕಿರುಪುಸ್ತಕವು ಕಾನೂನುಗಳ ಅಪಾಯಗಳ ನೀಲನಕ್ಷೆಯಾಗಿರುತ್ತದೆ ಮತ್ತು ಮಸೂದೆಗಳ ಬಗ್ಗೆ ಪಕ್ಷದ ದೃಷ್ಟಿಕೋನವೂ ಆಗಿರುತ್ತದೆ ಎಂದಿದ್ದಾರೆ.

‘ದೀದಿ’ಗೆ ಶಾಕ್ ಮೇಲೆ ಶಾಕ್ : ಶತಾಬ್ದಿ ರಾಯ್ ಫೇಸ್ ಬುಕ್ ಪೋಸ್ಟ್ ನಿಂದ TMC ಗೆ ಆಘಾತ..!

ಬಿಜೆಪಿ ಸರ್ಕಾರ ಪಾಪದ ಕೂಸು : ಸಿದ್ದರಾಮಯ್ಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd