ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಜನರಲ್ಲಿ ಮಳೆಯ ನಿರೀಕ್ಷೆ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಜೂನ್ 4ರಿಂದ ನಗರದಲ್ಲಿ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಪ್ರಕಾರ, ಬುಧವಾರ (ಜೂನ್ 4) ಲಘು ಮಳೆಯೊಂದಿಗೆ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಇದೆ. ನಂತರದ ದಿನಗಳಾದ ಜೂನ್ 5 ಮತ್ತು ಜೂನ್ 6 ರಂದು ಮಳೆ ಹೆಚ್ಚು ವ್ಯಾಪಕವಾಗಿ ಸುರಿಯಬಹುದು ಎಂದು ತಿಳಿಸಲಾಗಿದೆ.
ಈ ಬಾರಿ ಬರುವ ಮಳೆಯು ಬೆಂಗಳೂರಿಗೆ ಮುಂದಿನ ಹಂತದ ಮಳೆಗಾಲದ ಪ್ರಾರಂಭವನ್ನೇ ಸೂಚಿಸಬಹುದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದಾಗಿ ನಗರದಲ್ಲಿ ತಂಪಾದ ವಾತಾವರಣವಿದ್ದು, ಚಳಿಯ ಅನುಭವ ಜನರಿಗೆ ಸಾಧ್ಯವಾಗಲಿದೆ.








