ಕುಂದ್ರಾ ನಿರ್ಮಿಸಿದ್ದು `ಪೋರ್ನ್ ಚಿತ್ರವಲ್ಲ, ಸಾಫ್ಟ್ ಪೋರ್ನ್’
ಮುಂಬೈ : ರಾಜ್ ಕುಂದ್ರಾ ನಿರ್ಮಾಣ ಮಾಡಿದ್ದು ಅಶ್ಲೀಲ (ಪೋರ್ನ್) ಸಿನಿಮಾ ಅಲ್ಲ, ಅದು ಸಾಫ್ಟ್ ಪೋರ್ನ್ ಎಂದು ರಾಜ್ ಕುಂದ್ರಾ ಬಳಿಯಲ್ಲಿ ಕೆಲಸ ಮಾಡಿದ್ದ ಮಾಜಿ ಉದ್ಯೋಗಿ, ಕಂಟೆಂಟ್ ಕ್ರಿಯೇಟರ್ ತನ್ವೀರ್ ಹಶ್ಮಿ ಹೇಳಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅದರಂತೆ ತನ್ವೀರ್ ಹಶ್ಮಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಂ ಪೊಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಜ್ ಕುಂದ್ರಾ ಪರಿಚಯ ಆಗಿದ್ದು ಯಾವಾಗ ಇಬ್ಬರ ಮಧ್ಯೆ ವ್ಯವಹಾರ ಹೇಗಿತ್ತು? ಸಿನಿಮಾ ನಿರ್ಮಾಣದ ಕುರಿತು ಪೊಲೀಸರು ಕೇಳಿದರು.
ಆದ್ರೆ ನಾನು ಒಮ್ಮೆಯೂ ರಾಜ್ ಕುಂದ್ರಾ ಅವರನ್ನ ಮುಖಾಮುಖಿಯಾಗಿ ಭೇಟಿಯಾಗಿಲ್ಲ ಎಂದು ಹೇಳಿದ್ದೇನೆ. ನಾನು ರಾಜ್ ಕುಂದ್ರಾ ಒಡೆತನದ ಆಪ್ ಗೆ ಸಂಬಂಧಿಸಿದ ಕಂಟೆಂಟ್ ಸಿದ್ಧಪಡಿಸುವ ಕೆಲಸ ಮಾಡಿದ್ದೇನೆ. ಆದ್ರೆ ನಾನು ರಾಜ್ ಕುಂದ್ರಾ ಕಂಪನಿಯ ಉದ್ಯೋಗಿ ಅಲ್ಲ.
ನಾವು ಸುಮಾರು 20 ರಿಂದ 25 ನಿಮಿಷದ ಅವಧಿಯ ಕಿರುಚಿತ್ರ ಮಾಡಿದ್ದೇವೆ. ಆದ್ರೆ ಅದ್ಯಾವುದು ಅಶ್ಲೀಲ ಚಿತ್ರಗಳಲ್ಲ. ಆ ಚಿತ್ರಗಳಿಗೆ ನಾವು ಸಾಫ್ಟ್ ಪೋರ್ನ್ ಎಂದು ಕರೆಯತ್ತೇವೆ ಅಂತ ಹೇಳಿದ್ದಾರೆ.