Ramalinga Readdy | ರಾಮಲಿಂಗಾರೆಡ್ಡಿ ಬಿಜೆಪಿ ಸೇರಲು ಬಂದಿದ್ರು
ಹಾಸನ : ಬಿಜೆಪಿ ಸೇರಲು ರಾಮಲಿಂಗಾರೆಡ್ಡಿ ಏರ್ ಪೋರ್ಟ್ ವರೆಗೂ ಬಂದಿದ್ರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ, ಆರ್ ಎಸ್ ಎಸ್ ನವರು ಬ್ರಿಷಟರ ಜೊತೆ ಶಾಮೀಲಾಗಿದ್ದರು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂಬ ರಾಮಲಿಂಗಾರೆಡ್ಡಿ ಹೇಳಿಕೆಗೆ ಹಾಸನದಲ್ಲಿ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಈಶ್ವರಪ್ಪ, 17 ಜನ ಬಿಜೆಪಿ ಸೇರಿದರಲ್ಲ ಅವರ ಜೊತೆ ರಾಮಲಿಂಗಾರೆಡ್ಡಿನೂ ಬಂದಿದ್ದರು, ಆಗ ಅವರಿಗೆ ಗೊತ್ತಿರಲಿಲ್ವಾ ?

ಆರ್ ಎಸ್ ಎಸ್, ಬಿಜೆಪಿ ಏನು ಅಂತಾ ಅವರಿಗೆ ಆಗಲೂ ಗೊತ್ತು, ಈಗಲೂ ಗೊತ್ತು. ಅವರ ಮನಸ್ಸಿನಲ್ಲಿ ಇವು ರಾಷ್ಟ್ರಭಕ್ತಿ ಸಂಘಟನೆಗಳು ಅಂತಾ ಗೊತ್ತಿದೆ ಎಂದು ಹೇಳಿದರು.
ಮುಂದುವರೆದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ದೇಶದಲ್ಲಿ ದೇಶದ್ರೋಹಿ ಸಂಘಟನೆಗಳು ಇಷ್ಟು ಬೆಳೆಯಲು ಕಾರಣ ಇದೇ ಕಾಂಗ್ರೆಸ್ ಎಂದು ಆರೋಪಿಸಿದರು.