ರಂಜಾನ್ ಉಪವಾಸ ಆರಂಭ – ಆದ್ರೆ ಕೋವಿಡ್ ಗೈಡ್ ಲೈನ್ಸ್ ಫಾಲೋ ಮಾಡ್ಲೇ ಬೇಕು..!
ಬೆಂಗಳೂರು: ಇಂದಿನಿಂದ ಮುಸ್ಲಿಂರ ಪವಿತ್ರ ರಂಜಾನ್ ಉಪವಾಸ ಆರಂಭವಾಗಿದೆ. ಆದ್ರೆ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗ್ತಾಯಿರುವ ಬೆನ್ನಲ್ಲೇ ಸರ್ಕಾರ ಸಾಮೂಹಿಕ ಪ್ರಾರ್ಥೆಗಳಿಗೆ ಸಂಬಂಧಿಸಿದಂತೆ ಹೊಸ ಕೋವಿಡ್ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
ಒಂದು ತಿಂಗಳ ಕಾಲ ಈ ಆಚರಣೆ ಇರಲಿದ್ದು, ಕಂಟೈನ್ ಮೆಂಟ್ ಜೋನ್ ನಲ್ಲಿರುವ ಮಸೀದಿಗಳನ್ನು ತೆರೆಯುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಬಾರಿಯೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿಲ್ಲ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. 2 ಮೀಟರ್ ನಷ್ಟು ಅಂತರ ಕಾಪಾಡಬೇಕು.
ಸಾರ್ವಜನಿಕವಾಗಿ ಇಫ್ತಾರ್ ನಡೆಸಬಾರದು. ಮನೆಯಲ್ಲಿಯೇ ಇಫ್ತಾರ್ ಕೂಟ ಆಯೋಜಿಸಬಹುದು. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು ಸೇರಿದಂತೆ ಹಲವಾರು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಗೈಡ್ ಲೈನ್ಸ್ ಅನ್ವಯ ರಂಜಾನ್ ಆಚರಣೆ
ಮಾಡಬೇಕಿದೆ.
BIGGBOSS 8 – ಸಿಕ್ಕ ಅದೃಷ್ಟ ಕಾಲಲ್ಲಿ ಒದ್ದು ಶಮಂತ್ ಗೆ ವರ ಕೊಟ್ಟ ವೈಜಯಂತಿ – ಹಲವರಿಗೆ ಅನ್ಯಾಯ ಮಾಡಿದ್ದು ಸರಿನಾ..?
ಉಪವಾಸವಿದ್ದೂ ವಾಕ್ಸಿಸ್ ಪಡೆದುಕೊಳ್ಳಬಹುದಾ..?
ಛೇ..! ದಲಿತ ಯುವಕನಿಗೆ ಉಗುಳಿದ ಎಂಜಲು ನೆಕ್ಕಿಸಿದ ಗ್ರಾ.ಪಂ ಮಾಜಿ ಅಧ್ಯಕ್ಷ