Ramesh jarakiholi ರಮೇಶ ಜಾರಕಿಹೊಳಿ ಚುನಾವಣೆ ಪ್ರಚಾರಕ್ಕೆ ಬರ್ತಾರೆ : ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ರಮೇಶ ಜಾರಕಿಹೊಳಿ ಚುನಾವಣೆ ಪ್ರಚಾರಕ್ಕೆ ಬರ್ತಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ದಿನ ಕೆಲಸ ಒತ್ತಡದಿಂದ ಪ್ರಚಾರ ಮಾಡಲು ಆಗಿಲ್ಲ. ಇಂದಿನಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಆರಂಭ ಮಾಡ್ತಿನಿ.
ಪಕ್ಷದ ನಿರ್ದೇಶನದಂತೆ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ 55 ಸಾವಿರ ಲಿಡ್ ಅರಬಾವಿಯಿಂದ ಆಗಿತ್ತು. ಗೋಕಾಕ್ ಕ್ಷೇತ್ರದಿಂದ 60 ಸಾವಿರ ಲೀಡ್ ಆಗಿತ್ತು. ಇದೇ ರೀತಿ ಮತ್ತೆ ಅದೇ ಲೀಡ್ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಸಿಡಿ ವಿಚಾರವಾಗಿ ಮಾತನಾಡಿ, ಯುವತಿ ಎಸ್ ಐಟಿ ಮುಂದೆ ಹಾಜರಾಗಿ ಏನು ಹೇಳಿದ್ದಾಳೆ ಗೊತ್ತಿಲ್ಲ. ಪ್ರಕರಣ ಸಂಬಂಧ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಎಸ್ ಐ ಟಿ ತನಿಖೆ ಮಾಡಿ ತೀರ್ಮಾನ ಮಾಡಲಿ ಎಂದು ತಿಳಿಸಿದರು.