ಮಲಯಾಳಂನ ಖ್ಯಾತ ಕಿರುತೆರೆ ನಟ ನಿಗೂಢ ಸಾವು – ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆ
ಕೇರಳ : ಮಳಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ಅವರ ಶವ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಿಜಕ್ಕೂ ಆತ್ಮಹತ್ಯೆಯೇ ಮಾಡಿಕೊಂಡಿದ್ದಾರಾ ಅನ್ನೋ ಅನುಮಾನ ಮೂಡಿದೆ. ಕೇರಳದ ಜನಪ್ರಿಯ ಧಾರಾವಾಹಿ ಮತ್ತು ಚಿತ್ರ ನಟರಾಗಿದ್ದ ರಮೇಶ್ ವಾಲಿಯಸಾಳ ಅವರು ತಿರುವನಂತಪುರದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನೂ ಕೋವಿಡ್ ಹಾವಳಿ , ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕಾರಣ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಕೂಡ ಹೇಳಲಾಗ್ತಿದೆ.
ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರು ತನ್ನ ಎರಡನೇ ಪತ್ನಿ ಮತ್ತು ಮಗನೊಂದಿಗೆ ವಾಲಿಯಾಶಾಲಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಘಟನೆಗೆ ಎರಡು ದಿನಗಳ ಮುಂಚೆ, ರಮೇಶ್ ತನ್ನ ಇತ್ತೀಚಿನ ಪ್ರಾಜೆಕ್ಟ್ ಗಾಗಿ ಲೊಕೇಶನ್ ನಿಂದ ಶೂಟಿಂಗ್ ಮುಗಿಸಿ ಮರಳಿದ್ದರು ಎನ್ನಲಾಗಿದೆ. ಅವರು ಕೊನೆಯದಾಗಿ ಪ್ರಸಾರವಾದ ‘ಪೌರ್ಣಮಿತಿಂಗಲ್’ ಧಾರಾವಾಹಿಯಲ್ಲಿ ನಟಿಸಿದ್ದರು. ಸುಮಾರು 22 ವರ್ಷಗಳಿಂದಲೂ ಇವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.