ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ‘ಅನಿಮಲ್’ ಚಿತ್ರದ ಯಶಸ್ಸಿನ ನಂತರ ಅವರು ಬಾಲಿವುಡ್ ಬೆಡಗಿಯಾಗಿದ್ದಾರೆ. ಆದರೆ, ಈಗ ಕಿಸ್ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಅವರ ಕೆನ್ನೆಗೆ ರಣ್ ಬೀರ್ ಕಪೂರ್ ಮುತ್ತಿಟ್ಟಿದ್ದಾರೆ. ‘ಅನಿಮಲ್’ (Animal) ಸಿನಿಮಾ 500ಕ್ಕೂ ಅಧಿಕ ಕೋಟಿ ರೂ. ಬಾಚಿರುವ ಹಿನ್ನೆಲೆಯಲ್ಲಿ ಚಿತ್ರ ತಂಡವು ಮುಂಬಯಿನ ಖಾಸಗಿ ಹೋಟೆಲ್ ನಲ್ಲಿ ಸಕ್ಸಸ್ ಪಾರ್ಟಿ ಇಟ್ಟುಕೊಂಡಿತ್ತು.
ಈ ಸಂದರ್ಭದಲ್ಲಿ ರಶ್ಮಿಕಾ ಕಪ್ಪು ಬಣ್ಣದ ಡ್ರೆಸ್ ತೊಟ್ಟು ಹಾಟ್ ಆಗಿ ಕಾಣುತ್ತಿದ್ದರು. ರಶ್ಮಿಕಾರನ್ನು ನೋಡುತ್ತಿದ್ದಂತೆ ರಣ್ ಬೀರ್ (Ranbir Kapoor) ತಬ್ಬಿಕೊಂಡು ಮುದ್ದಾಡಿದ್ದಾರೆ. ಅಲ್ಲದೇ, ಕೆನ್ನೆಗೆ ಕಿಸ್ ಮಾಡಿದ್ದಾರೆ. ಈ ಕುರಿತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.








