ಶಾಕಿಂಗ್ : 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ..!
ಉತ್ತರಪ್ರದೇಶ: 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರೇ ಸಾಮೂಹಿಕ ಅತ್ಯಾಚಾರವೆಸಗಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇನ್ನೂ ಅತ್ಯಾಚಾರ ಬಳಿಕ 20 ರೂಪಾಯಿ ಕೊಟ್ಟು ಯಾರಿಗೂ ಹೇಳದಂತೆ ಹೇಳಿ ಹೋಗಿದ್ದಾರೆ ಎನ್ನಲಾಗಿದೆ. ಆದ್ರೆ ಬಾಲಕ ಈ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದ್ದು, ಆತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
14ರ ಬಾಲಕನ ಮೇಲೆ 23 ರ ಮಹಿಳೆಯಿಂದ ನಿರಂತರ ಅತ್ಯಾಚಾರ : ಗರ್ಭಿಣಿಯಾದ ಆರೋಪಿ..!
ಬಾಲಕ ತನ್ನ ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ವೇಳೆ ಕೃಷಿ ಉಪಕರಣವನ್ನು ತೆಗೆದುಕೊಂಡು ಬರಲು ತೆರಳಿದ್ದಾನೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಸಿಕ್ಕ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಈತನನ್ನು ಪುಸಲಾಯಿಸಿ ನಿರ್ಜನ ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸಬೇಡ ಎಂದು 20 ರೂಪಾಯಿ ಕೊಟ್ಟು ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.