ರಾಮನಗರ: ಇತ್ತೀಚೆಗೆ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವರಂತೂ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಕಾಮುಕನೊಬ್ಬ ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾತನೂರು ರಸ್ತೆ ಹತ್ತಿರ ಈ ಘಟನೆ ನಡೆದಿದೆ. ಬಳ್ಳಾರಿ ಮೂಲದ ಬಸವ ಎಂಬ ವ್ಯಕ್ತಿ ಈ ವಿಕೃತಿ ಮೆರೆದಿದ್ದಾನೆ. ಬಸವನನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿರ್ಜನ ಪ್ರದೇಶದಲ್ಲಿ ನಾಯಿ ಕಟ್ಟಿ ಹಾಕಿದ್ದ ಬಸವ, ಅದರ ಜೊತೆ ಅನೈಸರ್ಗಿಕ ಲೈಂಗಿಕಕ್ರಿಯೆ ಮಾಡುತ್ತಿದ್ದ. ಇದನ್ನು ಸ್ಥಳೀಯರು ಗಮನಿಸಿದ್ದರು. ನಾಯಿಯೊಂದಿಗೆ ಸಂಭೋಗ ಮಾಡುತ್ತಿದ್ದಾಗಲೇ ಆತನನ್ನು ಬಂಧಿಸಿ, ಥಳಿಸಿದ್ದಾರೆ. ಆನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.