ಪಾಪಿ ತಂದೆಯೊಬ್ಬ ತನ್ನ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಗಾಜಿಯಾಬಾದ್‍ನಲ್ಲಿ ಈ ದುರ್ಘಟನೆ ನಡೆದಿದೆ. 40 ವರ್ಷದ ಪಾಪಿ ತಂದೆ ಕಳೆದ ನಾಲ್ಕು ವರ್ಷಗಳಿಂದಲೂ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು, ಸದ್ಯ ಕಾಮುಕ ತಂದೆಯನ್ನು ಬಂಧಿಸಲಾಗಿದೆ.
17 ಮತ್ತು 15 ವರ್ಷದ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿಕೊಂಡು ಬಂದಿದ್ದ ಪಾಪಿ ತಂದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಯ ಕಾಮುಕತನದಿಂದ ಘಾಸಿಗೊಳಗಾಗಿದ್ದ ಬಾಲಕಿಯರು ಅರೆ ಮನಸ್ಸಿನಿಂದ ಶಾಲೆಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಕರು, ವಿಚಾರಿಸಿದಾಗ ಆಕೆ ಸತ್ಯಾಂಶ ಬಯಲು ಮಾಡಿದ್ದಾಳೆ. ಶಾಲೆಯಿಂದ ಹೊರಬಂದ ನಂತರ, ತಾಯಿ ಕೆಲಸದಿಂದ ಬರುವವರೆಗೂ ಉದ್ಯಾನವನದಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಸಹೋದರಿಯರು ಶಿಕ್ಷಕರಿಗೆ ತಿಳಿಸಿದರು. ತಂದೆಗೆ ಹಲವು ದಿನಗಳಿಂದಲೂ ಕೆಲಸವಿಲ್ಲ. ತಾಯಿಯೇ ದುಡಿಯುತ್ತಿದ್ದರು ಎಂದು ಹೇಳಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.