ಪೆರೋಲ್ ಮೇಲೆ ಬಂದಿದ್ದ ಕೊಲೆ ಆರೋಪಿ ಪರಿಚಯಸ್ಥ ಮಹಿಳೆ ಹಾಗೂ ಅವರ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ನಾಗ್ಪುರದಲ್ಲಿ ನಡೆದಿದೆ. ನಗರದ ಜಾರಿಪಟ್ಕ ಪ್ರದೇಶದ ನಿವಾಸಿ ಭರತ್ ಗೋಸ್ವಾಮಿ (33) ಎಂಬಾತನೇ ಈ ಕೃತ್ಯ ಎಸಗಿರುವ ವ್ಯಕ್ತಿ. ಈತ 2014ರಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಹೊರ ಬಂದ ಮೇಲೆ 43 ವರ್ಷದ ಮಹಿಳೆಯ ಮನೆಗೆ ಹೋಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಅವರ ಅಪ್ರಾಪ್ತ ಮಗಳ ಮೇಲೆ ಕೂಡ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ಬಹಿರಂಗ ಮಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಫ್‌ಐಆರ್ ಉಲ್ಲೇಖಿಸಲಾಗಿದೆ.
ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಗೋಸ್ವಾಮಿಯನ್ನು ಅತ್ಯಾಚಾರ ಪ್ರಕರಣದಡಿ ಬಂಧಿಸಲಾಗಿದೆ.