ಹುಬ್ಬಳ್ಳಿ: ಶಿಕ್ಷಕಿಗೆ ಮತ್ತು ಬರುವ ಔಷಧಿ ನೀಡಿ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗುಲಾಮ ಜಿಲಾನಿ ಅಜಹರಿ ಮೌಲ್ವಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು (Old hubli Police Station) ಬಂಧಿಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗುಲಾಮ್ ಜಿಲಾನಿ ಅಜಹರಿ ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ.
23 ವರ್ಷದ ಹುಬ್ಬಳ್ಳಿ ಮೂಲದ ಯುವತಿ ಮಧ್ಯಪ್ರದೇಶದ ಖಂಡವಾದಲ್ಲಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿಯ ಮದರಸಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಆರೋಪಿತ ಯುವತಿಯ ತಂದೆಗೆ ಪರಿಚಯಸ್ಥನಾಗಿದ್ದ. ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಆತ ನಂಬಿಸಿದ್ದ. ಹೀಗಾಗಿ ಯುವತಿ ಖಂಡವಾ ಪಟ್ಟಣಕ್ಕೆ ತೆರಳಿದ್ದರು. ಅಲ್ಲಿ ನನಗೆ ವಿಚ್ಛೇದನವಾಗಿದೆ. ನಾನು ನಿನ್ನನ್ನು ಮದುವೆಯಾಗುತ್ತನೆ ಎಂದು ಹೇಳಿ ಔಷಧಿ ನೀಡಿ, ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಎರಡು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ. ನಾಲ್ಕು ಬಾರಿ ಗರ್ಭಪಾತ ಮಾಡಿಸಿದ್ದಾನೆ.
ಐದನೇ ಬಾರಿ ಗರ್ಭಿಣಿಯಾದ ವೇಳೆ ತವರು ಮನೆ ಹುಬ್ಬಳ್ಳಿಯಲ್ಲಿ ಬಿಟ್ಟು ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಬೇಡ ಎಂದು ಹೇಳಿದ್ದಾನೆ. ಒಂದು ವೇಳೆ ಈ ವಿಷಯ ಬಾಯಿಬಿಟ್ಟರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿಯನ್ನು ಮಧ್ಯಪ್ರದೇಶದ ಖಂಡವಾದಿಂದ ಬಂಧಿಸಿ ಪೊಲೀಸರು ಹುಬ್ಬಳ್ಳಿಗೆ ಕರೆ ತರುತ್ತಿದ್ದಾರೆ.