Rapid Road ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳ ಎಂದರೆ ಬರಿ ಗುಂಡಿಗಳಿಂದ ಕುಡಿದ ರಸ್ತೆ ಗುಂಡಿಗಳೆಂದು ಭಾಸವಾಗುತ್ತದೆ ಅದರಿಂದ ಆಗಿವ ಅಪಗಾತ ಅನಾಹುತಗಳೆ ನೆನಪಾಗುತ್ತವೆ ಆದರೆ ಇವುಗಳನ್ನು ತಪ್ಪಿಸಲ bbmp ಉತ್ತಮ ಉಪಾಯ ಮಾಡಿ ಆಧುನಿಕವಾಗಿ ಟೆಕ್ನಾಲಜಿ ಬಳಸಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ
ಈ ರೀತಿ ಪ್ರಯತ್ನವು ದೇಶದಲ್ಲೇ ಮೊಟ್ಟ ಮೊದಲ ಬಾರಿಯಾಗೆ ಆಧುನಿಕ ಟೆಕ್ನಾಲಜಿ ಬಳಸಿರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನ ರಸ್ತೆಗುಂಡಿಗಳಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ರಸ್ತೆಬಳಸುತ್ತಿದ್ದಾರೆ. ಮಳೆ ಬಂದರೆ ಸಾಕು ರಸ್ತೆ ಗುಂಡಿಗಳಿಂದ ತುಂಬಿ ಬಿಡುತ್ತವೆ. ಇದಕ್ಕೆ ಪರಿಣಾಮವಾಗಿ ರಸ್ತೆಗುಂಡಿಗಳಿಂದಾಗಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ
ಆದರೆ ಈಗ ಬಿಬಿಎಂಪಿ ಬೆಂಗಳೂರಿನ ರಸ್ತೆಗಳಿಗೆ ಆಧುನಿಕ ಆವಿಶ್ಕಾರ ಕೊಡುತ್ತಿದೆ. ರಾಪಿಡ್ ರೋಡ್ ಮೂಲಕ ವೈಟ್ ಟಾಪಿಂಗ್ ಮಾದರಿಯ ರಸ್ತೆಗಳನ್ನು ತಯಾರಿಸುತ್ತಿದೆ.
ಬೆಂಗಳೂರು ನಗರದ ಹಳೆ ಮದ್ರಾಸ್ ರಸ್ತೆಯಲ್ಲಿ ರಾಪಿಡ್ ರೋಡ್ (Rapid Road) ಎಂಬ ವಿನೂತನ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಿಸುತ್ತಿದೆ.
ಸ್ಥಳದಲ್ಲಿ ಯಾವುದೇ ಕಾಂಕ್ರಿಟ್ ಮಿಶ್ರಣ ಇಲ್ಲದೆ ಕಾರ್ಖಾನೆಗಳಲ್ಲೇ ತಯಾರಾದ ಸ್ಲಾಬ್ಗಳನ್ನು ತಂದು ಜೋಡಿಸಿ ಈ Rapid ರೋಡ್ ಟೆಕ್ನಾಲಜಿ ಬಳಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ವೈಟ್ ಟಾಪಿಂಗ್ ಮಾಡಿದರೆ ರಸ್ತೆ ಟ್ರಾಫಿಕ್ ಫ್ರೀ ಮಾಡೋಕೆ 25 ದಿನಗಳ ಅವಧಿ ಬೇಕು. ಆದರೆ ರ್ಯಾಪಿಡ್ ರೋಡ್ ಟೆಕ್ನಾಲಜಿ ಮೂಲಕ ನಿರ್ಮಿಸಿದರೆ ಕೇವಲ ನಾಲ್ಕೇ ದಿನದಲ್ಲಿ ಸಂಚಾರಕ್ಕೆ ರಸ್ತೆ ಸಿಗಲಿವೆ.
ದೇಶದಲ್ಲಿ ಇದೇ ಮೊದಲ ಸಲಾ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಪೈಲಟ್ ಯೋಜನೆಯಾಗಿ ನಗರದ ಹಳೆ ಮದ್ರಾಸ್ ರಸ್ತೆಯ 500 ಮೀಟರ್ ರಸ್ತೆಯ ಸ್ಲಾಬ್ ಅಳವಡಿಸಲಾಗುತ್ತಿದೆ.
ಈ ವಿನೂತನ ರಸ್ತೆ ಸುಮಾರು 45ಕ್ಕೂ ಅಧಿಕ ವರ್ಷ ಬಾಳಿಕೆ ಬರುತ್ತೆ ಎಂದು ಬಿಬಿಎಂಪಿ ಇಂಜಿನಿಯರ್ ಚೀಫ್ ಪ್ರಹ್ಲಾದ್ ತಿಳಿಸಿದ್ದಾರೆ.
ಸಾರ್ವಜನಿಕರು ಈ ವ್ಯವಸ್ಥೆ ಕಂಡು ರಾಪಿಡ್ ರೋಡ್ ನಿರ್ಮಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಕೆಲವರು ರಸ್ತೆ ನಿರ್ಮಿಸಿದ ನಂತರವೆ ಇದರ ಪ್ರಯೋಜನ ತಿಳಿಯಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ .