ಬೆಂಗಳೂರು: ಇಂದು ನಾಡಿನಲ್ಲೆಡೆ ಮಕರ ಸಂಕ್ರಾಂತಿ (Makar Sankranti)ಯ ಸಂಭ್ರಮ ಮನೆ ಮಾಡಿದೆ. ಹೀಗಾಗಿಯೇ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಯಿತು.
ಪ್ರಕೃತಿಯ ವಿಸ್ಮಯಕ್ಕೆ ಸನ್ನಿಧಾನ ಸಾಕ್ಷಿಯಾಗಿದ್ದು, ಸಂಜೆ 5.25ಕ್ಕೆ ಸರಿಯಾಗಿ ಗವಿಗಂಗಾಧರೇಶ್ವರನಿಗೆ ಸೂರ್ಯದೇವ ಸ್ಪರ್ಶಿಸಿದ್ದಾನೆ. ಈ ವಿದ್ಯಾಮಾನ ಕಣ್ತುಂಬಿಕೊಳ್ಳಲು ಭಕ್ತರು ಸಾಕ್ಷಿಯಾದರು.
ಸೂರ್ಯ ರಶ್ಮಿ ಸ್ಪರ್ಶ ಸಂದರ್ಭದಲ್ಲಿ ಗವಿಗಂಗಾದರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಪ್ರವೇಶ ಮಾಡಿದ ಸೂರ್ಯ ರಶ್ಮಿ ಮೊದಲು ನಂದಿ ಸ್ಪರ್ಶಿಸಿದ. ಸ್ಪಟಿಕ ಲಿಂಗಕ್ಕೆ ಸ್ಪರ್ಶಿಸಿ ನಂತರ ಶಿವಲಿಂಗ ಪೀಠದ ಸ್ಪರ್ಶ ಮಾಡಿದ. ನಂತರ ಸೂರ್ಯದೇವ ಈಶ್ವರನ ಪಾದ ಸ್ಪರ್ಶ ಮಾಡಿದ. ಲಿಂಗಭಾಗದಲ್ಲಿ 18 ಸೆಕೆಂಡ್ಗಳ ಕಾಲ ಸೂರ್ಯರಶ್ಮಿ ಬಿದ್ದಿದೆ. ಹೀಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಎಲ್ಲರೂ ಎಲ್ ಇಡಿ ಪರದೆ ಮೂಲಕ ಕಣ್ತುಂಬಿಕೊಂಡಿದ್ದಾರೆ.