ಅಂತರಾಷ್ಟ್ರೀಯ ಬ್ರ್ಯಾಂಡ್ ಗೆ ಅಂಬಾಸಿಡರ್ ಆದ ‘ಕಿರಿಕ್ ರಾಣಿ’..!
ಕಿರಿಕ್ ಪಾರ್ಟಿ ಮೂಲಕ ಸಿನಿ ಜರ್ನಿ ಆರಂಭಿಸಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫೇಮ್ ಗಳಿಸಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತಮಿಳು, ಕನ್ನಡ , ತೆಲುಗು ಈಗ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಷ್ಮಿಕಾ ಮಂದಣ್ಣ ಈಗ ಒಂತರಾಷ್ಟ್ರೀಯ ಫುಡ್ ಬ್ರ್ಯಾಂಡ್ ಗೆ ಅಂಬಾಸಿಡರ್ ಆಗಿದ್ದಾರೆ.
ಹೌದು.. ವಿಶ್ವದ ಅತಿ ದೊಡ್ಡ ಫಾಸ್ಟ್ಫುಡ್ಜಾಯಿಂಟ್ MCdonald’s ಭಾರತದ ದಕ್ಷಿಣ ಹಾಗೂ ಪಶ್ಚಿಮ ಭಾಗಕ್ಕೆ ರಾಯಭಾರಿಯನ್ನಾಗಿ ರಶ್ಮಿಕಾ ಅನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮೆಕ್ಡೊನಾಲ್ಡ್ಸ್ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ಭಾಗದ ವ್ಯವಸ್ಥಾಪಕ ಅರವಿಂದ ಆರ್ಪಿ, ‘ಯುವ ಸಮುದಾಯಕ್ಕೆ ರಶ್ಮಿಕಾ ಮಂದಣ್ಣ ಬಹುಬೇಗ ಕನೆಕ್ಟ್ ಆಗುತ್ತಾರೆ. ಅವರೊಬ್ಬ ಯೂತ್ ಐಕಾನ್ ಆಗಿದ್ದಾರೆ. ಅವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಸಂತಸ ತಂದಿದೆ’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ಕಾಲೇಜು ದಿನಗಳಲ್ಲಿ ಮೆಕ್ ಡಿಯಲ್ಲಿಯೇ ಕುಳಿತು ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದೆ ಈಗ ಅದೇ ಬ್ರ್ಯಾಂಡ್ಗೆ ಅಂಬಾಸಿಡರ್ ಆಗಿದ್ದೇನೆ. ಇದು ಬಹಳ ಸಂತಸ ತಂದಿದೆ ಎಂದಿದ್ದಾರೆ.