ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!!

1 min read

ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!!

ಹೈದರಾಬಾದ್: ರಶ್ಮಿಕಾ ಮಂದಣ್ಣ ಸದ್ಯ ಕನ್ನಡದಿಂದ ಹೋಗಿ ಟಾಲಿವುಡ್ ನಲ್ಲಿ ನೆಲೆಯೂರಿದ್ದಾರೆ.. ಬಾಲಿವುಡ್ ನಲ್ಲಿ ನೆಲೆಯೂರಲ್ಲಿ ಟ್ರೈ ಮಾಡ್ತಿದ್ದಾರೆ.. ಅದೃಷ್ಟದಿಂದಲೇ ಯಶಸ್ಸಿನ ಶಿಖರವೇರಿರುವ ರಶ್ಮಿಕಾ , ಜಾಹಿರಾತುಗಳಲ್ಲೂ ಬ್ಯುಸಿಯಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ವಿಶ್ವ ಪ್ರಸಿದ್ಧ ಫುಡ್ ಫ್ರಾಂಚೈಸಿ ಮೆಕ್ ಡೊನಾಲ್ಡ್ ನ ಭಾರತೀಯ ರಾಯಭಾರಿಯೂ ಆಗಿರುವ ಕ್ರಶ್ಮಿಕಾ ಆಗಾಗ ಮೆಕ್ ಡೊನಾಲ್ಡ್ಸ್ ಮೀಲ್ ನ ಪ್ರಮೋಟ್ ಮಾಡೋ ವಿಡಿಯೋಗಳನ್ನ ಹಂಚಿಕೊಳ್ತಾ ಇರುತ್ತಾರೆ..

ಅದ್ರಲ್ಲೂ ಮೆಕ್ ಡೊನಾಲ್ಡ್ಸ್ ರಶ್ಮಿಕಾ ಹೆಸರಲ್ಲೇ ಮೀಲ್ ಕೂಡ ಪರಿಚಯ ಮಾಡಿಸಿರುವುದು ಗೊತ್ತಿಲ್ದೇ ಇರೋ ವಿಚಾರವೇನಲ್ಲಾ.. ಸದ್ಯ ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ..    ಇತ್ತೀಚೆಗೆ ರಶ್ಮಿಕಾ ಫುಡ್ ಡೆಲಿವರಿ ಹುಡುಗಿಯಂತೆ ಬಟ್ಟೆ ಧರಿಸಿ , ಅಂತೆಯೇ ತಯಾರಾಗಿ ಮಾಸ್ಕ್ ಧರಿಸಿ ಮೆಕ್ ಡೊನಾಲ್ಡ್ಸ್ ನಲ್ಲಿ ಫುಡ್ ಆರ್ಡರ್ ಮಾಡಿದ್ದ ಕೆಲ ಗ್ರಾಹಕರ ಮನೆಗಳಿಗೆ  ತೆರಳಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.. ಕೆಲವರಂತೂ ರಶ್ಮಿಕಾ ಜೊತೆಗೆ ಸಖತ್ ಹ್ಯಾಪಿಯಾಗಿ ಸೆಲ್ಫಿಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ..

 

ಈ ಸಂಬಂಧಿತ ವಿಡಿಯೋವನ್ನ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು , ಇದರಲ್ಲಿ ಅವರು ಮೆಕ್ ಡೊನಾಲ್ಡ್ ಕಂಪನಿಯದ್ದೇ ಬಟ್ಟೆ ಧರಿಸಿ ಅದೇ ಕಂಪನಿಯದ್ದೇ ಹೆಲ್ಮೆಟ್ ಧರಿಸಿ , ಕಂಪನಿಯ ದ್ವಿಚಕ್ರ ವಾಹಹನ ೋಡಿಸಿಕೊಂಡು ಬಂದಿರುವುದನ್ನ ನೋಡಬಹುದು.. ಸ್ವತಃ ಈ ವೀಡಿಯೋವನ್ನು ಮೆಕ್ ಡೋನಾಲ್ಡ್ ತನ್ನ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು, ರಶ್ಮಿಕಾ ಕೂಡ ಅದನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ರಶ್ಮಿಕಾ ಒಂದು ಮನೆಗೆ ತೆರಳಿ ಫುಡ್ ನೀಡುವ ಸಂದರ್ಭದಲ್ಲಿ ನೀವು ರಶ್ಮಿಕಾ ಮಂದಣ್ಣ ಅಲ್ಲವಾ ಎಂದು ಗ್ರಾಹಕರು ಕೇಳುವ ಮೂಲಕ ರಶ್ಮಿಕಾರನ್ನು ಕಂಡು ಹಿಡಿದ್ದಿದ್ದಾರೆ. ನಂತರ ಆ ಮನೆಯವರು ಶಾಕ್ ಆಗಿ ಬಳಿಕ ಖುಷಿಯಿಂದ ರಶ್ಮಿಕಾ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿದ್ದು, ದಿ ರಶ್ಮಿಕಾ ಮೀಲ್ ಬಗ್ಗೆ ಪ್ರಶ್ನೆಗಳನ್ನು  ಕೇಳಿದ್ದಾರೆ.. ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ರಶ್ಮಿಕಾ  ಇದು ಒಂಥರಾ ಫನ್ ಆಗಿತ್ತು, ಗ್ರಾಹಕರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ನಾನು ಊಹಿಸಿರಲಿಲ್ಲ ಎಂದಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd