ಜಿಮ್ ನಲ್ಲಿ ವರ್ಕೌಟ್ – ಆಚೆ ಬಂದು ಮುಖ ಮುಚ್ಚಿಕೊಂಡಿದ್ದೇಕೆ ರಶ್ಮಿಕಾ – ದೇವರಕೊಂಡ…?
ಹೈದ್ರಾಬಾದ್ : ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕಿರಿಕ್ ರಾಣಿ ಹಾಗೂ ತೆಲುಗಿನ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಅನ್ನೋ ವದಂತಿಗಳು ಇಂದು ನೆನ್ನೆಯದಲ್ಲ. ಗೀತಾ ಗೋವಿಂದಂ ಸಿನಿಮಾದ ಟೈಮ್ ನಿಂದಲೂ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತೆ. ಹಾಗಂತ ಈ ಜೋಡಿ ಮಾತ್ರ ಇಂತಹ ಗಾಸಿಫ್ ಗಳಿಗೆ ತಲೆ ಕೆಡಿಸಿಕೊಳ್ತಿರುವಂತೆ ಕಾಣ್ತಿಲ್ಲ..
ಆಗಾಗ ಒಟ್ಟಾಗಿ ಕಾಣಿಸಿಕೊಂಡು ಅನುಮಾನಗಳಿಗೆ ಪುಷ್ಠಿ ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮುಂಬೈ ಹೋಟೆಲ್ ಒಂದರಲ್ಲಿ ಇಬ್ಬರೂ ಡಿನ್ನರ್ ಮಡಿ ಸುದ್ದಿಯಾಗಿದ್ರು. ಈಗ ಹೈದ್ರಾಬಾದ್ ನ ಜಿಮ್ಗ ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ್ದಾರೆ. ಆದ್ರೆ ವರ್ಕೌಟ ಮಾಡಿದ್ದು ದೊಡ್ಡ ವಿಚಾರವೇನಲ್ಲ. ಆದ್ರೆ ಈ ಇಬ್ಬರು ಜಿಮ್ ನಿಂದ ಆಚೆ ಬಂದು ಲಿಫ್ಟ್ ನಿಂದ ಹೊರ ಬರುತ್ತಿದ್ದಂತೆ ಏನೋ ತಪ್ಪು ಮಾಡಿರುವ ಹಾಗೆ ಸಿಕ್ಕಿಬಿದ್ದ ಹಾಗೆ ಮುಖಮುಚ್ಚಿಕೊಂಡಿರುವುದು ಈಗ ಚರ್ಚೆಯಾಗ್ತಿರುವ ವಿಚಾರ.
ಮುಂಬೈನಲ್ಲೇ ನೆಲೆಸಿದ್ದ ರಶ್ಮಿಕಾ ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ಏರಿಕೆಯಾದ ಹಿನ್ನಲ್ಲೇ ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಹೈದರಾಬಾದ್ಗೆ ವಾಪಸ್ ಆಗಿದ್ದಾರೆ. ಹೈದರಾಬಾದ್ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಜಿಮ್ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಇಬ್ಬರೂ ವರ್ಕೌಟ್ ಮಾಡಿ ಜಿಮ್ನಿಂದ ಹೊರಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಶ್ಮಿಕಾ ಜೋರಾಗಿ ನಗುತ್ತಿದ್ದು, ವಿಜಯ್ ದೇವರಕೊಂಡ ಮಾಸ್ಕ್ ಧರಿಸಿದ್ದಲ್ಲದೇ ಕ್ಯಾಪ್ನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಲಿಫ್ಟ್ನಿಂದ ಹೊರಬರುತ್ತಿದ್ದಂತೆ ಮುಖಮುಚ್ಚಿಕೊಂಡು ಬಂದ ದೇವರಕೊಂಡ ಮತ್ತು ಹಿಂದೆಯಿಂದ ನಗುತ್ತಾ ಹೊರಗೆ ಬರುತ್ತಿರುವ ರಶ್ಮಿಕಾ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಕ್ಯಾಮರಾ ಕಣ್ಣಿಗೆ ಸೆರೆಯಾಗಬಾರದು ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡಿದ್ದಾರಾ ಎಂಬ ಚರ್ಚೆಗಳಾಗುತ್ತಿವೆ.