ಟಾಲಿವುಡ್ನಲ್ಲಿ ಹೆಸರು ಗಳಿಸಿರುವ ರಶ್ಮಿ ಮಂದಣ್ಣ ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಡಲು ಮುಂದಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ಮಿಷನ್ ಮಜ್ನು’ ಚಿತ್ರದಲ್ಲಿ ಕಿರಿಕ್ ಬೆಡಗಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಮತ್ತು ರಶ್ಮಿ ನಡುವಿನ ನಡೆದ ಚರ್ಚೆ ಭಾರಿ ವೈರಲ್ ಆಗಿದೆ.
ಪ್ರಸ್ತುತ ರಷ್ಮಿಕಾ ಅಲ್ಲಿ ಇಲ್ಲಿ ಎಂಬ ವ್ಯತ್ಯಾಸವಿಲ್ಲದೇ ಸಿನಿ ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆಲ್ರೆಡಿ ಕಾರ್ತಿ ಸುಲ್ತಾನ್ ಸಿನಿಮಾದಲ್ಲಿ ನಟಿಸೋ ಮೂಲಕ ಕಾಲಿವುಡ್ ಗೆ ರಷ್ಮಿಕಾ ಪಾರ್ದಾಪಣೆ ಮಾಡಿದ್ದಾರೆ. ಅದರಂತೆ ಬಾಲಿವುಡ್ ನಲ್ಲೂ
ಒಂದು ಸಿನಿಮಾವನ್ನ ಒಪ್ಪಿಕೊಂಡಿದ್ದು, ‘ಮಿಷನ್ ಮಜ್ನು’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ.
ಸದ್ಯ ಮುಂಬೈನಲ್ಲಿ ಶೂಟಿಂಗ್ ಮುಂದುವರಿದಿದೆ.
ಈ ಮಧ್ಯೆ ಸುಲ್ತಾನ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿಯಾಗಿದ್ದರು.
ಇತ್ತ ಸುಲ್ತಾನ್ ಸಿನಿಮಾ ಪ್ರಚಾರದ ಕೆಲಸ ಮತ್ತೊಂದೆಡೆ ‘ಮಿಷನ್ ಮಜ್ನು’ ಸಿನಿಮಾ ಶೂಟಿಂಗ್ ನಲ್ಲೂ ಭಾಗಿ ಆಗುತ್ತಿರುವ ರಶ್ಮಿಕಾ ಡೆಡಿಕೇಷನ್ ಗೆ ನಿರ್ದೇಶಕ ಫಿದಾ ಆಗಿದ್ದು, ಒಂದು ಗಿಫ್ಟ್ ನೀಡಿದ್ದಾರಂತೆ. ಈ ವಿಚಾರವನ್ನ ರಶ್ಮಿಕಾ ಹೇಳುತ್ತಾ ಸಂಸತ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಿರ್ದೇಶಕ, ರಶ್ಮಿಕಾ ಮಧ್ಯೆ ನಡೆದ ಚರ್ಚೆ ಭಾರಿ ವೈರಲ್ ಆಗುತ್ತಿದೆ.
ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ “ಹಿಂದಿ ಚಲನಚಿತ್ರೋದ್ಯಮದಲ್ಲಿ ನನಗೆ ಮೊದಲ ಪ್ರಶಸ್ತಿ ಸಿಕ್ಕಿದೆ” ಎಂದು ಬರೆದುಕೊಂಡಿದ್ದರು. ಇದಕ್ಕೆ ಮುಖೇಶ್ ಫನ್ನಿ ಕಾಮೆಂಟ್ ಮಾಡಿದ್ದು, ಇದು ಕೇವಲ ಆರಂಭವಷ್ಟೆ ಇನ್ನು ಎಷ್ಟೋ ಬರುತ್ವೆ ಎಂದಿದ್ದಾರೆ.
ಇನ್ನು ರಶ್ಮಿಕಾ ಪ್ರಸ್ತುತ ತೆಲುಗಿನಲ್ಲಿ “ಪುಷ್ಪಾ, ಆಡಾಳ್ಲೂ ಮೀಕು ಜೋಹರ್ಲು” ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.








