Raste guṇḍi-ಎಲ್ಲಿ ನೋಡಿದರು ಎತ್ತನೋಡಿದರು ಕಣ್ಣು ಕ್ಕುಕ್ಕುವಂತೆ ರಾರಾಜಿಸುವ ರಸ್ತೆ ಗುಂಡಿಗಳು , ರಸ್ತೆಗಿಂತ ಹೆಚ್ಚು ದೃಷ್ಟಿಗೆ ಗೋಚರಿಸುವುದ ರಸ್ತೆ ಗುಂಡಿ , ರಸ್ತೆಯಲ್ಲಿ ಓಡಾಡುವುದು ಎಂದರೆ ಅಡ್ವೆಂಚರಸ್ ಪಾರ್ಕಗೆ ಹೊದ ಹಾಗೆ , ಜೀವಾ ಬಾಯಿಗೆ ಬರುವ ಅನುಬವ ಬೇಕಾದರೆ ರಸ್ತೆ ಗೆ ಇಳಿಯಬೇಕು ಎನ್ನುವುದು ಸೂಕ್ತ . ಯಾಕಪ್ಪಾ ಈ ಸುದ್ದಿ ಇವಾಗ ಹೇಳುತ್ತಿದ್ದೆವೆ ಎಂದು ಯೋಚಿಸುತ್ತಿದ್ದಿರಾ .. ?
ಮೈಸೂರು ನಗರದ ಹುಣಸೂರು ನರಸಿಂಹಸ್ವಾಮಿ ಬಡಾವಣೆಯ ಸರ್ಕಾರಿ ಶಾಲೆಯ ಎದುರುಗಡೆ ಇದೆ ರೀತಿ ಅಡ್ವೆಂಚರ್ ಸವಾರಿಯ ಅನುಭವ ನೀಡುವ ರಸ್ತೆ ಗುಂಡಿಗಳು ಇದ್ದು , ಇಲ್ಲಿ ದೊಡ್ಡ ಗುಂಡಿಗಳಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ .
ದಿನನಿತ್ಯ ರಸ್ತೆಯಲ್ಲಿ ಓಡಾಡುವುದು ಸವಾರರಿಗೆ ಬಲು ಸಂಕಷ್ಟದ ಮಾರ್ಗವಾಗಿತ್ತು . ಈ ವಿಷಯ ಕುರಿತು ರಸ್ತೆ ಸರಿ ಮಾಡುವಂತೆ ಗುಂಡಿಯನ್ನು ಮುಚ್ಚುವಂತೆ ಅನೇಕ ಬಾರಿ ಸ್ಥಳೀಯರು ಮನವಿ ಸಲ್ಲಿಸಿದ್ದರು ಕ್ಯಾರೆ ಎನ್ನದ ಅಧಿಕಾರಿಗಳು,ಜನಪ್ರತಿನಿಧಿಗಳ ವರ್ತನೆಗೆ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ರಸ್ತೆ ಗುಂಡಿಗಳಿಗೆ ಮಣ್ಣು ತುಂಬಿ ಅಡ್ವೆಂಚರಸ್ ರಸ್ತೆಯನ್ನು ತಮ್ಮ ಕೈಯಾರೆ ಮುಚ್ಚಿದ್ದಾರೆ.
ಪ್ರತಿದಿನ ಈ ರೋಚಕ ಅನುಭವ ನೀಡುವ ರಸ್ತೆಯಲ್ಲಿ ಶಾಲಾ ಮಕ್ಕಳು ಸಹ ಸಂಚರಿಸುವ ಮಾರ್ಗವಾಗಿದ್ದು ಇಲ್ಲಿ ದಿನನಿತ್ಯ ನೂರಾರು ವಾಹನಗಳು ಸಹ ಈ ರಸ್ತೆಯಲ್ಲಿ ಸಂಚರಿಸುತ್ತವೆ.
ಇಷ್ಟಲ್ಲದೆ ಸರ್ಕಾರಿ ಶಾಲೆಯ ಎದುರುಗಡೆಯೇ ಮಾರಕ ರಸ್ತೆ ಇರುವುದರಿಂದ ಮಕ್ಕಳು ಸಹ ಸಂಚಲಿಸುವುದರಿಂದ ಆಕ್ಸಿಡೆಂಟ್ ಭಯ ರಸ್ತೆಗಳಲ್ಲಿ ಓಡಾಡುತ್ತಾರೆ.
ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಂಚರಿಸುವಾಗ ಜೀವ ಭಯದಲ್ಲೇ ಗಾಡಿ ಓಡಿಸುವ ಪರಿಸ್ಥಿತಿ ಎದುರಾಗಿದ್ದು ಇಷ್ಟಿದ್ದರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದೆ ಇರುವುದು ವಿಪರ್ಯಾಸ್.
ಇದನ್ನು ಕಂಡ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ದಿನನಿತ್ಯ ವಾಹನಗಳ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಜನರು ಮನವಿ ಮಾಡಿಕೊಂಡಿದ್ದರೆ .