ಟೀಂ ಇಂಡಿಯಾ ಆಟಗಾರರು ಯಂತ್ರಗಳೇ, ಪೆಟ್ರೋಲ್ ಸುರಿದು ಓಡಿಸಲು..?

1 min read

ಟೀಂ ಇಂಡಿಯಾ ಆಟಗಾರರು ಯಂತ್ರಗಳೇ, ಪೆಟ್ರೋಲ್ ಸುರಿದು ಓಡಿಸಲು..?

ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ ಯುಗ ಟಿ20 ವಿಶ್ವಕಪ್-2021 ರೊಂದಿಗೆ ಕೊನೆಗೊಂಡಿದೆ.

ನವೆಂಬರ್ 8 ರಂದು ಮೆಗಾ ಟೂರ್ನಮೆಂಟ್‍ನ ಭಾಗವಾಗಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ರವಿ ಶಾಸ್ತ್ರಿ ತನ್ನ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಪಂದ್ಯದ ಬಳಿಕ ಸ್ಟಾರ್ ಸ್ಪೋಟ್ರ್ಸ್ ಜೊತೆ ಮಾತನಾಡಿದ ರವಿಶಾಸ್ತ್ರಿ, ಬಿಸಿಸಿಐ ಮತ್ತು ಐಸಿಸಿ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ.

ಪ್ರಸಕ್ತ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ವೈಫಲ್ಯಗಳ ಬಗ್ಗೆ ಮಾತನಾಡಿದ ಅವರು, ಬಿಸಿಸಿಐ ಮತ್ತು ಐಸಿಸಿಯನ್ನು ಪರೋಕ್ಷವಾಗಿ ದೂಷಿಸಿದರು.

ಕಳೆದ ಆರು ತಿಂಗಳಿಂದ ಬಯೋಬಬಲ್‍ನಲ್ಲಿರುವ ಟೀಂ ಇಂಡಿಯಾ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿದ್ದಾರೆ ಎಂಬುದನ್ನು ಕ್ರಿಕೆಟ್ ಮಂಡಳಿಗಳು ಮತ್ತು ಅಭಿಮಾನಿಗಳು ಅರಿತುಕೊಳ್ಳಬೇಕು.

Ravi-Shastri saaksha tv

ಉಸಿರುಗಟ್ಟುವ ಬಿಡುವಿಲ್ಲದ ವೇಳಾಪಟ್ಟಿಗೆ ತಯಾರಿ ಮಾಡಿ ಟೀಂ ಇಂಡಿಯಾದ ವೈಫಲ್ಯಗಳಿಗೆ ಐಸಿಸಿ ಮತ್ತು ಬಿಸಿಸಿಐ ಪರೋಕ್ಷವಾಗಿ ಕಾರಣ ಎಂದು ರವಿ ಆರೋಪಿಸಿದ್ದಾರೆ.

ಯಾವುದೇ ತಂಡ ವಿಶ್ವಕಪ್‍ಗೂ ಮುನ್ನ ಫ್ರೀ ಆಗಿರಲು ಬಯಸುತ್ತದೆ. ಆದರೆ, ಭಾರತೀಯ ಆಟಗಾರರ ವಿಚಾರದಲ್ಲಿ ಹಾಗಾಗಲಿಲ್ಲ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಟೀಂ ಇಂಡಿಯಾ ಆಟಗಾರರು ಪೆಟ್ರೋಲ್ ಸುರಿದು ಓಡುವ ಯಂತ್ರಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏತನ್ಮಧ್ಯೆ, ರವಿಶಾಸ್ತ್ರಿ 2014 ರಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.

ಅವರ ಅವಧಿಯಲ್ಲಿ ಭಾರತ ತಂಡವು 2019 ರ ಏಕದಿನ ವಿಶ್ವಕಪ್‍ನ ಸೆಮಿಫೈನಲ್‍ಗೆ ಮತ್ತು 2021 ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್‍ಗೆ ತಲುಪಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd