ಕಪ್ ಗೆಲ್ಲದೇ ಇದ್ರೂ #ban ಆಗದೇ #fixing ಮಾಡದೇ ಪ್ರತಿ ಸಲ ಮನಗೆಲ್ಲುವ ಟೀಮ್ RCB : ಸಿಂಪಲ್ ಸುನಿ..!
ಈ ಬಾರಿಯಾದ್ರೂ ಕಪ್ ನಮ್ದೇ ಅಂದುಕೊಂಡಿದ್ದ RCB ಅಭಿಮಾನಿಗಳು ನಿರಾಸೆ ಅನುಭವಿಸುವಂತಾಗಿದೆ. ಎಲಿಮಿನೇಟರ್ ನಲ್ಲಿ ಕೊಹ್ಲಿ ಪಡೆ ಕೆಕೆಆರ್ ವಿರುದ್ಧ ಸೋಲನುಭವಿಸಿದೆ. ಇನ್ನೂ ಬೇಸರದ ಸಂಗತಿಯೆಂದ್ರೆ ವಿರಾಟ್ ಕೊಹ್ಲಿ ಕಪ್ ಗೆಲ್ಲದೇ ಕ್ಯಾಪ್ಟನ್ಸಿ ಇಂದ ಇಳಿದಿರುವುದು. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಮತ್ತೊಂದೆಡೆ “ಮುಂದಿನ ಸಲ ಕಪ್ ನಮ್ದೇ” ಎಂದು RCB ಫ್ಯಾನ್ಸ್ ಹೇಳ್ತಾಯಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ನ ನಿರ್ದೇಶಕ ಸಿಂಪಲ್ ಸುನಿ ಅವರು ಟ್ವೀಟ್ ಮಾಡಿದ್ದು, RCB ಫ್ಯಾನ್ಸ್ ಹುಮ್ಮಸ್ಸು ಹೆಚ್ಚಿಸಿದ್ದಾರೆ.
ಹೌದು.. “ ಈ ಸಲನೂ ತಪ್ಪು ನಮ್ದೇ ಪರವಾಗಿಲ್ಲ” “ಮುಂದಿನ ಸಲ ಕಪ್ ನಮ್ದೇ” ಈ #depression ಯುಗದಲ್ಲಿ ಸೋತರೂ ಕುಗ್ಗದೇ , ಎದೆಏರಿಸಿ ಹುಮ್ಮಸ್ಸು ತುಂಬುವಂತ ಅಭಿಮಾನಿಗಳು #ನಮ್ಮRCB ಅಭಿಮಾನಿಗಳು ಇವರು ತಾಳ್ಮೆಯ ಪ್ರತಿರೂಪ. ಆದ್ರೂ ಯಾರದೋ ಇದೆ ಶಾಪ. ಇರಲಿ, ಕಪ್ ಗೆಲ್ಲದಿದ್ರೂ #ban ಆಗದೇ #fixing ಮಾಡದೇ ಪ್ರತಿಸಲವೂ ಮನಗೆಲ್ಲೋ ತಂಡ #RCB #ವಂದನೆಗಳು” ಎಂದು ಬರೆದುಕೊಂಡಿದ್ದಾರೆ.