RCB | ಡಿಕೆ ಅಂದ್ರೆ ಸುಮ್ನೆನಾ..? ಸೋಶಿಯಲ್ ಮೀಡಿಯಾ ಡಿಕೆಮಯ..!!
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಅಬ್ಬರಿಸಿದರು.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಎಂಟು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಒಂದು ಬೌಂಡರಿಯೊಂದಿಗೆ 30 ರನ್ ಚಚ್ಚಿದರು. ಸ್ಟ್ರೈಕ್ ರೇಟ್ 375.
ನಾಯಕ ಫಾಫ್ ಡುಪ್ಲೆಸಿಸ್ (ಔಟಾಗದೆ 73) ಜೊತೆಯಲ್ಲಿ ಡಿಕೆ ಅದ್ಭುತ ಇನ್ನಿಂಗ್ಸ್ ಆಡುವುದರೊಂದಿಗೆ RCB ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು.
ಹೀಗಾಗಿ ಎದುರಾಳಿಗೆ 193 ರನ್ಗಳ ಗುರಿ ನೀಡಿತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸದ್ಯಕ್ಕೆ ದಿನೇಶ್ ಕಾರ್ತಿಕ್ ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ನೆಟ್ಟಿಗರು ಡಿಕೆ ಹೆಸರಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಕ್ರೀಸ್ ಗೆ ಬಂದು ಅಮೋಘ ಇನ್ನಿಂಗ್ಸ್ ಆಡಿ ನಗುವಿನ ಮೂಲಕ ಮೈದಾನವನ್ನು ಬಿಡುವುದು, ಡಿಕೆಶಿಗೆ ಮಾತ್ರ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
ಇದು ಹೀಗಿದ್ದರೇ ಸನ್ ರೈಸರ್ಸ್ ವಿರುದ್ದದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಆರ್ ಸಿಬಿ ಸ್ಟಾರ್ ಕಿಂಗ್ ವಿರಾಟ್ ಕೊಹ್ಲಿ, ಡಿಕೆ ಡ್ರೆಸ್ಸಿಂಗ್ ರೂಮ್ ಗೆ ತೆರಳುತ್ತಿದ್ದಂತೆ ಟೇಕ್ ಏ ಬೋ ಎಂದು ಅಪ್ಪಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. rcb-dinesh-karthik-375-strike-rate-knock-virat-kohli-bows-down