RCB | ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಘರ್ಜಿಸಿದ ಲಯನ್ಸ್
PL 2022 ಋತುವಿನ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಆಟಗಾರರು ಧೂಳೆಬ್ಬಿಸಿದ್ದಾರೆ.
ಡುಪ್ಲೆಸಿಸ್ XI ಮತ್ತು ಹರ್ಷಲ್ ಪಟೇಲ್ XI ಎರಡೂ ನಡುವಿನ ಪಂದ್ಯದಲ್ಲಿ ಬ್ಯಾಟರ್ ಗಳು ಅಬ್ಬರಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಡುಪ್ಲೆಸಿಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದರೆ, ಹರ್ಷಲ್ ಪಟೇಲ್ ತಂಡ ನಿಗದಿತ ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ 2 ರನ್ ಗಳಿಂದ ಸೋಲನುಭವಿಸಿದೆ.
ಅಭ್ಯಾಸ ಪಂದ್ಯದಲ್ಲಿ ಡುಪ್ಲೆಸಿಸ್ (40 ಎಸೆತಗಳಲ್ಲಿ 76), ಶೆರ್ಫೇನ್ ರುದರ್ಫೋರ್ಡ್ (59) ಮತ್ತು ಸುಯಶ್ ಪ್ರಭು ದೇಸಾಯಿ (46 ಎಸೆತಗಳಲ್ಲಿ 87) ಅರ್ಧಶತಕ ಬಾರಿಸಿದರು.
ಯುವ ಬ್ಯಾಟರ್ ಅನುಜ್ ರಾವತ್ (46), ವಿಕೆಟ್ ಕೀಪರ್ ದಿನೇಶ್ ದಿನೇಶ್ (21 ಎಸೆತಗಳಲ್ಲಿ 49) ಡೆವಿಡ್ ವಿಲ್ಲೆ (17 ಎಸೆತಗಳಲ್ಲಿ 25) ರನ್ ಬಾರಿಸಿದ್ದಾರೆ.
ಬೌಲಿಂಗ್ ನಲ್ಲಿ ಆಕಾಶ್ ದೀಪ್ 4 ವಿಕೆಟ್ ಪಡೆದರೆ ಹರ್ಷಲ್ ಪಟೇಲ್ 3 ಹಾಗೂ ಕರ್ಣ್ ಶರ್ಮಾ 2 ವಿಕೆಟ್ ಪಡೆದರು.
ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ಭಾನುವಾರ (ಮಾರ್ಚ್ 27) ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.