RCB ತಂಡದ ಆರಂಭಿಕರು ಇವರೇ ನೋಡಿ..
ಐಪಿಎಲ್ 2022 ರ ಸೀಸನ್ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇದೆ.
ಆದ್ರೂ ಇನ್ನೂ ತಂಡದ ನಾಯಕನನ್ನು ಫೈನಲ್ ಮಾಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆರಂಭಿಕರ ಬಗ್ಗೆ ಸುಳಿವು ನೀಡಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಡುಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸೋದು ಬಹುತೇಕ ಫಿಕ್ಸ್ ಆಗಿದೆ.
ಈ ಕುರಿತಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಟ್ವಿಟ್ಟರ್ ನಲ್ಲಿ ಸುಳಿವು ನೀಡಿದೆ.
ಕೊಹ್ಲಿ ಜೊತೆ ಆರ್‌ಸಿಬಿ ಜರ್ಸಿಯಲ್ಲಿ ಡುಪ್ಲೆಸಿಸ್‌ನ ಮಾರ್ಫಿಂಗ್ ಫೋಟೋ ಹಂಚಿಕೊಂಡಿದೆ.
Just a picture from the future. 😉
Excited to see these✌🏻stars in a partnership, 12th Man Army? 🤜🏻🤛🏻#PlayBold #WeAreChallengers #IPL2022 pic.twitter.com/NB7NpogCWE
— Royal Challengers Bangalore (@RCBTweets) March 2, 2022
ಜೊತೆಗೆ ಈ ಸ್ಟಾರ್ ಆಟಗಾರರನ್ನು ಜೊತೆಯಾಗಿ ನೋಡಲು ಉತ್ಸುಕರಾಗಿದ್ದೇವೆ ಎಂದಿದೆ.
ಇದರೊಂದಿಗೆ ಆರ್‌ಸಿಬಿ ಆರಂಭಿಕ ಜೋಡಿ ಎಂದು ಕೊಹ್ಲಿ ಮತ್ತು ಡುಪ್ಲೆಸಿಸ್ ಖಚಿತಪಡಿಸಿದ್ದಾರೆ.
ಆರಂಭದಲ್ಲಿ ಆರಂಭಿಕ ಆಟಗಾರ ಅನುಜ್ ರಾವತ್, ಡುಪ್ಲೆಸಿಸ್ ಗೆ ಜೋಡಿಯಾಗಲಿದ್ದಾರೆ ಎಂದು ವದಂತಿಗಳಿದ್ದವು.
ಆದ್ರೆ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಆರ್ ಸಿಬಿ ಒಂದು ಕ್ಲಾರಿಟಿ ಕೊಟ್ಟಿದೆ.
rcb-posts-photo-virat-kohli-du-plessis