RCB vs DC WPL : ಮೊದಲ ಪಂದ್ಯದಲ್ಲೇ ಎಡವಿದ RCB – ಡೆಲ್ಲಿಗೆ 65 ರನ್ ಗಳ ಗೆಲುವು…
ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 65 ರನ್ಗಳಿಂದ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಗರಿಷ್ಠ 84 ಮತ್ತು ನಾಯಕಿ ಮೆಗ್ ಲ್ಯಾನಿಂಗ್ 72 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್ಗೆ 162 ರನ್ ಸೇರಿಸಿದರು. RCB ಪರ ಹೀದರ್ ನೈಟ್ ಎರಡೂ ವಿಕೆಟ್ ಪಡಯುವ ಮೂಲಕ ಈ ಜೋಡಿಯನ್ನ ಬೇರ್ಪಡಿಸಿದರು.
ಆನಂತರ ಬ್ಯಾಟಿಂಗ್ ಗೆ ಇಳಿದ ಮರಿಯನ್ ಕ್ಯಾಪ್, ಜೆಮಿಮಾ ರಾಡ್ರಿಗಸ್ ತಂಡದ ಸ್ಕೋರ್ ನ್ನ 200 ಗಡ ದಾಟಿಸಿದರು. ಕೊನೆಯಲ್ಲಿ 20 ಓವರ್ ಗಳಲ್ಲಿ ಡೆಲ್ಲಿ ಬೆಂಗಳೂರು 224 ರನ್ ಗಳ ಗುರಿ ನೀಡಿತ್ತು.
ಇದಕ್ಕೆ ಉತ್ತರವಾಗಿ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ಗೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ದೆಹಲಿ ಪರ ತಾರಾ ನಾರ್ರಿಸ್ 29 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಬೆಂಗಳುರಿನ ಯಾವ ಬ್ಯಾಟ್ ವುಮೆನ್ಗಳು 35 ರನ್ ಗಳಿಗಿಂತ ಹೆಚ್ಚಿನ ರನ್ ಗಳಿಸಲಿಲ್ಲ.
224 ರನ್ಗಳ ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಮಂಧಾನ 35 ಮತ್ತು ಪೆರ್ರಿ 31 ರನ್ ಗಳಿಸಿ ಔಟಾದರು. ಇವರಲ್ಲದೆ ಸೋಫಿ ಡಿವೈನ್ 14 ರನ್ ಗಳಿಸಿದರು. ಆದರೆ, ದಿಶಾ ಕಸತ್ 9, ರಿಚಾ ಘೋಷ್ 2, ಆಶಾ ಶೋಭನಾ 2 ಮತ್ತು ಕನಿಕಾ ಅಹುಜಾ ಶೂನ್ಯಕ್ಕೆ ಔಟಾದರೂ. ಬೃಹತ್ ಮೊತ್ತ ಬೆಂಬೆತ್ತುವಲ್ಲಿ ಮೊದಲ ಪಂದ್ಯದಲ್ಲಿಯೇ RCB ಎಡವಿದೆ.
RCB vs DC WPL: RCB stumbles in the first match – Delhi wins by 65 runs…