ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ RCB

1 min read
RCB vs pbks match rcb miss golden chance saaksha tv

RCB vs pbks match rcb miss golden chance saaksha tv

ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್  ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರ್ಮಾಘಾತ ನೀಡಿದೆ.

ಹೌದು…! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಸುಲಭವಾಗಿ ಪ್ಲೇ ಆಫ್ಸ್ ಪ್ರವೇಶಿಸುವುದನ್ನ ತನ್ನ ಕೈಯಾರೆ ಮಿಸ್ ಮಾಡಿಕೊಂಡಿದೆ.

ಆರಂಭದಲ್ಲಿ ಖದರ್ ತೋರಿಸಿದ ಆರ್ ಸಿಬಿ ಯಾಕೋ ಮಂಕಾಗಿ ಹೋಯ್ತು.. ಅದರಲ್ಲೂ ಸುಲಭವಾಗಿ ಗೆಲ್ಲಬಹುದಾದ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 10 ಪಂದ್ಯಗಳಲ್ಲಿ ತಲಾ ಐದು ಸೋಲು, ಐದು ಗೆಲುವು ಸಾಧಿಸಿ ಡೋಲಾಯಮಾನ ಸ್ಥಿತಿಗೆ ತಲುಪಿತ್ತು.

ಪ್ಲೇ ಆಫ್ಸ್ ಗೆ ಪ್ರವೇಶಿಸಬೇಕಾದ್ರೆ ನಾಲ್ಕಕ್ಕೆ ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕಮ್ ಬ್ಯಾಕ್ ಮಾಡಿದ ಆರ್ ಸಿಬಿ ಚೆನ್ನೈ ಮತ್ತು ಹೈದರಾಬಾದ್ ತಂಡಗಳ ವಿರುದ್ಧ ಗೆದ್ದು ಪ್ಲೇ ಆಫ್ಸ್ ಹತ್ತಿರಕ್ಕೆ ಬಂದು ನಿಂತಿತ್ತು.

RCB vs pbks match rcb miss golden chance saaksha tv
RCB vs pbks match rcb miss golden chance saaksha tv

ಆದ್ರೆ ಇದೀಗ ತನ್ನ ಹಾದಿಗೆ ತಾನೇ ಬೇಲಿ ಹಾಕಿಕೊಂಡಿದೆ.

ಪಂಜಾಬ್ ವಿರುದ್ಧ 54 ರನ್ ಗಳ ಅಂತರದ ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ಸ್ ದಾರಿಗೆ ಮುಳ್ಳಾಗಬಹುದು. ಯಾಕಂದರೇ ಬೆಂಗಳೂರು ತಂಡ ಇನ್ನುಳಿಂದ ಒಂದು ಪಂದ್ಯದಲ್ಲಿ ಗೆಲ್ಲಲೇಬೇಕು.

ಆ ಪಂದ್ಯದಲ್ಲಿ ಗೆದ್ದರೇ ಆರ್ ಸಿಬಿ 16 ಅಂಕ ಪಡೆಯುತ್ತದೆ. ಆದ್ರೆ ಪ್ಲೇ ಆಫ್ಸ್ ಪ್ರವೇಶಿಸೋದು ನೂರಕ್ಕೆ ನೂರು ಸುಲಭವಲ್ಲ. ಬೆಂಗಳೂರು ಪ್ಲೇ ಆಫ್ಸ್ ಪ್ರವೇಶಿಸಬೇಕಾದ್ರೆ ಇತರ ತಂಡಗಳ ಸೋಲು ಗೆಲುವುಗಳು ಕೂಡ ಮಹತ್ವ ಪಡೆದುಕೊಂಡಿದೆ.

ಪಂಜಾಬ್ ವಿರುದ್ಧ ಸೋಲಿನ ಬಳಿಕ ಆರ್ ಸಿಬಿಯ ನೆಟ್ ರನ್ ರೇಟ್ ಮತಷ್ಟು ಕಳಪೆಯಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಗೆದ್ದರೂ ಪ್ಲೇ ಆಫ್ಸ್ ಪ್ರವೇಶಿಸುವುದು ಅನುಮಾನವಾಗಿದೆ.

ಒಂದು ವೇಳೆ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಬೇಕಾದರೇ ಗುಜರಾತ್ ಟೈಟಾನ್ಸ್ ವಿರುದ್ಧ ದೊಡ್ಡ ಗೆಲುವು ಸಾಧಿಸಲೇಬೇಕಾಗಿದೆ.

ಒಂದು ವೇಳೆ ಪಂಜಾಬ್ ವಿರುದ್ಧ ಬೆಂಗಳೂರು ತಂಡ ಗೆಲುವು ಸಾಧಿಸಿದ್ದರೇ ಈಗ 16 ಅಂಕಗಳನ್ನು ಪಡೆಯುತ್ತಿತ್ತು. ಆಗ ಮುಂದಿನ ಪಂದ್ಯದಲ್ಲಿ ಕೇವಲ ಗೆಲುವು ಸಾಧಿಸಿದ್ದರೇ ಬೆಂಗಳೂರು ತಂಡದ ಅಂಕ 18ಕ್ಕೇ ಏರಿಕೆಯಾಗುತ್ತಿತ್ತು.

ಆಗ ಯಾವುದೇ ಸೋಲು ಗೆಲುವುಗಳ ಲೆಕ್ಕಾಚಾರವಿಲ್ಲದೇ ಸುಲಭವಾಗಿ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಬಹುದಾಗಿತ್ತು. ಆದ್ರೆ ಈಗ ಸೀನ್ ರಿವರ್ಸ್ ಆಗಿದ್ದು, ಟೈಟಾನ್ಸ್ ವಿರುದ್ಧ ಬೆಂಗಳೂರು ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.RCB vs pbks match rcb miss golden chance

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd