RCB vs PBSK Match | ಕಿಂಗ್ಸ್ ಬೇಟೆಗೆ ಚಾಲೆಂಜರ್ಸ್ ರೆಡಿ

1 min read
rcb-captain-faf-du-plessis-makes-big-statement-virat-kohli-form saaksha tv

rcb-captain-faf-du-plessis-makes-big-statement-virat-kohli-form saaksha tv

RCB vs PBSK Match | ಕಿಂಗ್ಸ್ ಬೇಟೆಗೆ ಚಾಲೆಂಜರ್ಸ್ ರೆಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೋಂದು ಪಂದ್ಯ ಗೆದ್ದರೇ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಲಿದೆ. ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಬೆಂಗಳೂರು ತಂಡದ ಆತ್ಮವಿಶ್ವಾಸ ಡಬಲ್ ಆಗಿದೆ. ಇದೇ ಜೋಷ್ ನಲ್ಲಿ ಇಂದು ನಡೆಯಲಿರುವ ಪಂಜಾಬ್ ವಿರುದ್ಧದ ಸಮರಕ್ಕೆ ಆರ್ ಸಿಬಿ ಪಾಳಯ ಸಜ್ಜಾಗಿದೆ.

ಹೌದು…! ಇಂಡಿಯನ್ ಪ್ರಿಮಿಯರ್ ಲೀಗ್ ನ 60ನೇ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲ್ ಹಾಕಿದೆ. ಇದು ಬೆಂಗಳೂರು ತಂಡಕ್ಕೆ ಸೇಡಿನ ಸಮರ ಕೂಡ ಹೌದು..!! ಯಾಕಂದರೆ ಈ ಸೀಸನ್ ನಲ್ಲಿ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಸೆಣಸಿತ್ತು. ಆಗ ಬೆಂಗಳೂರು ತಂಡದ ಕೈಯಲ್ಲಿದ್ದ ಪಂದ್ಯವನ್ನು ಪಂಜಾಬ್ ತಂಡ ಕಿತ್ತುಕೊಂಡಿತ್ತು. ಹೀಗಾಗಿ ಆ ಪಂದ್ಯದ ಸೋಲಿನ  ಸೇಡನ್ನ ತೀರಿಸಿಕೊಳ್ಳಲು ಬೆಂಗಳೂರು ತಂಡ ಪ್ಲಾನ್ ಮಾಡಿಕೊಂಡಿದೆ.

ಇನ್ನು ಇಂದಿನ ಪಂದ್ಯಕ್ಕಾಗಿ ಬೆಂಗಳೂರು ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ತೀರಾ ಕಡಿಮೆ. ಯಾಕಂದರೇ ಕಳೆದ ಎರಡು ಪಂದ್ಯಗಳಿಂದ ಇದೇ ತಂಡ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿದೆ. ವಿರಾಟ್ ಕೊಹ್ಲಿ ಫಾರ್ಮ್ ಒಂದು ಬಿಟ್ಟರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯಾವುದೇ ತಲೆ ನೋವು ಇಲ್ಲ. ವಿರಾಟ್ ಕೊಹ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶೂನ್ಯಕ್ಕೆ ಔಟ್ ಆದ್ರೂ ಅವರ ಮೇಲೆ ಆರ್ ಸಿಬಿಗೆ ಸಾಕಷ್ಟು ನಂಬಿಕೆ ಇದೆ.

rcb-vs-pbks-match-RCB playing 11 saaksha tv
rcb-vs-pbks-match-RCB playing 11 saaksha tv

ಇನ್ನುಳಿದಂತೆ ಫಾಫ್ ಡುಪ್ಲಸಿಸ್ ನಾಯಕನ ಆಟವಾಡುತ್ತಿದ್ದಾರೆ. ಓನ್ ಡೌನ್ ನಲ್ಲಿ ಬರುವ ರಜತ್ ಪಟಿದಾರ್ ತಮಗೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಗ್ಲೇನ್ ಮ್ಯಾಕ್ಸ್ ಅವರಿಂದ ಬಿಗ್ ಇನ್ನಿಂಗ್ಸ್ ಬಾಕಿ ಇದೆ. ಮಹಿಪಾಲ್ ಲೋಮ್ರೋರ್ ಅವರು ಕೂಡ ಕೊನೆಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಅವರು ಕ್ರೀಸ್ ನಲ್ಲಿದ್ದಷ್ಟು ಹೊತ್ತು ಬೌಂಡರಿ, ಸಿಕ್ಸರ್ ಗಳ ಸುರಿಮಳೆಯಾಗುತ್ತಿದೆ. ಶಹಬ್ಬಾಸ್ ಅಹ್ಮದ್ ಕೂಡ ಚಾನ್ಸ್ ಸಿಕ್ಕರೇ ಅಬ್ಬರಿಸೋದು ಗ್ಯಾರಂಟಿ.

ಇತ್ತ ಬೌಲಿಂಗ್ ವಿಚಾರಕ್ಕೆ ಬಂದರೇ ಜೋಷ್ ಹ್ಯಾಜಲ್ ವುಡ್ ಪವರ್ ಪ್ಲೇ ನಲ್ಲಿ ಎದುರಾಳಿಗಳ ಪವರ್ ಕಟ್ ಮಾಡುತ್ತಿದ್ದಾರೆ. ಇವರಿಗೆ ಹರ್ಷಲ್ ಪಟೇಲ್ ಉತ್ತಮವಾಗಿ ಸಾಥ್ ನೀಡುತ್ತಿದ್ದಾರೆ. ವನಿಂದು ಹಸರಂಗ, ಮ್ಯಾಕ್ಸ್ ವೆಲ್, ಶಹಬ್ಬಾಸ್ ಅಹ್ಮದ್ ಸ್ಪಿನ್ ಬಲೆಗೆ ಎದುರಾಳಿಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಮೊಹ್ಮದ್ ಸಿರಾಜ್ ದುಬಾರಿಯಾದ್ರೂ ಕಂ ಬ್ಯಾಕ್ ಮಾಡುವ ಸಾಧ್ಯತೆಗಳಿವೆ.

ಆರ್ ಸಿಬಿ ತಂಡ ಪ್ಲೇಯಿಂಗ್  ಹೀಗಿದೆ

ವಿರಾಟ್ ಕೊಹ್ಲಿ

ಫಾಫ್ ಡುಪ್ಲಸಿಸ್

ರಜತ್ ಪಟಿದಾರ್

ಗ್ಲೇನ್ ಮ್ಯಾಕ್ಸ್ ವೆಲ್

ಮಹಿಪಾಲ್ ಲೋಮ್ರೋರ್

ಶಹಬ್ಬಾಸ್ ಅಹ್ಮದ್

ದಿನೇಶ್ ಕಾರ್ತಿಕ್

ವನಿಂದು ಹಸರಂಗ

ಹರ್ಷಲ್ ಪಟೇಲ್

ಜೋಷ್ ಹೆಜಲ್ ವುಡ್

ಮೊಹ್ಮದ್ ಸಿರಾಜ್      rcb-vs-pbks-match-RCB playing 11

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd