ಆರ್ಸಿಬಿ ಪ್ಲೇ-ಆಫ್ನಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿದೆ. ಆದರೆ ಕ್ವಾಲಿಫೈಯರ್ನಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಬೇಕಾದರೆ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲ, ಸಿಎಸ್ಕೆ ಕೊನೆಯ ಪಂದ್ಯವನ್ನು ಸೋಲಬೇಕು. ಕ್ವಾಲಿಫೈಯರ್ ಲೆಕ್ಕಾಚಾರದಲ್ಲಿ ಆರ್ಸಿಬಿಗೆ ಸನ್ರೈಸರ್ಸ್ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಸನ್ರೈಸರ್ಸ್ಗೆ ಮರ್ಯಾದೆ ಉಳಿಸಿಕೊಳ್ಳಲು ಇರುವ ಪಂದ್ಯ ಇದಾಗಿದೆ.
ಆರ್ಸಿಬಿ ಬ್ಯಾಟಿಂಗ್ ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗುತ್ತಿದೆ. ವಿರಾಟ್, ದೇವದತ್ ಮತ್ತು ಮ್ಯಾಕ್ಸ್ವೆಲ್ ರನ್ಬೇಟೆಯಲ್ಲಿದ್ದಾರೆ. ಎಬಿಡಿ ಬ್ಯಾಟ್ ಕೂಡ ಮಾತನಾಡುತ್ತಿದೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ತೊಟ್ಟುಕೊಂಡಿದ್ದಾರೆ. ಚಹಲ್ ಲೆಗ್ಸ್ಪಿನ್ ಮೋಡಿ ಮಾಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಸಿಬಿ ಗೆಲುವಿನ ಲಯದಲ್ಲಿದೆ.
ಹೈದ್ರಾಬಾದ್ ವಿಷಯ ಮಾತನಾಡಿದ್ರೆ ಕೇವಲ ವೈಫಲ್ಯವೇ ಕಣ್ಣಮುಂದೆ ಬರುತ್ತದೆ. ಸೀಸನ್ ಮುಗಿದರೆ ಸಾಕು ಅನ್ನುವ ಹಾಗಾಗಿದೆ. ಬ್ಯಾಟಿಂಗ್ನಲ್ಲಿ ಕಂಡಿರುವ ವೈಫಲ್ಯ ಬೌಲರ್ಗಳ ಮೇಲೆ ಒತ್ತಡ ಹೇರುತ್ತದೆ. ರಶೀದ್ ಖಾನ್ರಿಂದ ಹಿಡಿದು ಭುವನೇಶ್ವರ್ ಕುಮಾರ್ ತನಕ ಯಾರೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್ ಮೇಲೂ ಒಂದು ಕಣ್ಣಿದೆ. ಒಟ್ಟಿನಲ್ಲಿ ಆರ್ಸಿಬಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದರೆ, ಸನ್ರೈಸರ್ಸ್ ಮಾನ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿಯಲಿದೆ.
ಸಂಭಾವ್ಯ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು
- ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3. ಶ್ರೀಕರ್ ಭರತ್, 4. ಗ್ಲೆನ್ ಮ್ಯಾಕ್ಸ್ವೆಲ್, 5. ಎಬಿ ಡಿ ವಿಲಿಯರ್ಸ್, 6. ಡ್ಯಾನ್ ಕ್ರಿಶ್ಚಿಯನ್, 7. ಶಹಬಾಝ್ ಅಹ್ಮದ್, 8. ಜಾರ್ಜ್ ಗಾರ್ಟನ್, 9. ಹರ್ಷಲ್ ಪಟೇಲ್, 10. ಯುಜ್ವೇಂದ್ರ ಚಹಲ್, 11. ಮೊಹಮ್ಮದ್ ಸಿರಾಜ್
ಸನ್ರೈಸರ್ಸ್ ಹೈದ್ರಾಬಾದ್
- ಜೇಸನ್ ರಾಯ್, 2.ವೃದ್ಧಿಮಾನ್ ಸಾಹಾ, 3.ಕೇನ್ ವಿಲಿಯಮ್ಸನ್, 4. ಪ್ರಿಯಮ್ ಗರ್ಗ್, 5. ಅಭಿಷೇಕ್ ಶರ್ಮಾ, 6. ಅಬ್ದುಲ್ ಸಮದ್, 7. ಜೇಸನ್ ಹೋಲ್ಡರ್, 8. ರಶೀದ್ ಖಾನ್, 9. ಭುವನೇಶ್ವರ್ ಕುಮಾರ್, 10. ಸಿದ್ಧಾರ್ಥ್ ಕೌಲ್, 11. ಉಮ್ರನ್ ಮಲಿಕ್