RCB vs SRH Match | ವಿರಾಟ್ ಓಪನ್ ಮಾಡ್ತಾರಾ..RCB Probable XIs
ಇಂಡಿಯನ್ ಪ್ರಿಮಿಯರ್ ಲೀಗ್ ನ ಇವತ್ತಿನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಎದುರಿಸಲಿದೆ. ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಗುದ್ದಾಟ ನಡೆಸಲಿವೆ.
ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯಲ್ಲಿ ಈ ವರೆಗೂ ಏಳು ಪಂದ್ಯಗಳನ್ನಾಡಿದೆ. ಈ ಪೈಕಿ ಐದು ಪಂದ್ಯಗಳನ್ನ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆರ್ ಸಿಬಿ ತಂಡ ಕಳೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ 18 ರನ್ ಗಳೊಂದಿಗೆ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಈ ಮ್ಯಾಚ್ ನಲ್ಲಿ ಫಾಫ್ ಡುಪ್ಲಸಿಸ್ 96 ರನ್ ಗಳಿಸಿದ್ರೆ ಬೌಲಿಂಗ್ ನಲ್ಲಿ ಹೆಜಲ್ ವುಡ್ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಗೆಲುವಿನ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಇಂದಿನ ಪಂದ್ಯದಲ್ಲಿ ಗೆದ್ದು, ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾಗುವ ಪ್ಲಾನ್ ನಲ್ಲಿದೆ.
ಆರ್ ಸಿಬಿ ತಂಡಕ್ಕೆ ಸಾಂಘೀಕ ಹೋರಾಟ ಪ್ಲಸ್ ಪಾಯಿಂಟ್ ಆಗಿದೆ. ಆದ್ರೆ ಟಾಪ್ ಆರ್ಡರ್ ಸಮಸ್ಯೆ ಬೆಂಬಿಡದ ಬೇತಾಳನಂತೆ ಕಾಡುತ್ತಿದೆ. ಅನೂಜ್ ರಾವತ್ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಹಳೆ ಖದರ್ ಕಳೆದುಕೊಂಡಿದ್ದಾರೆ. ಇದು ತಂಡದ ಬ್ಯಾಟಿಂಗ್ ವಿಭಾಗದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಇನ್ನಿಂಗ್ಸ್ ಓಪನ್ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ. ಅದೇ ರೀತಿ ಅನೂಜ್ ಪ್ಲೇಸ್ ಗೆ ಪಟಿದಾರ್ ಅಥವಾ ಮಹಿಪಾಲ್ ಅವಕಾಶ ಪಡೆಯುವ ಸಾಧ್ಯತೆಗಳಿವೆ.
ಇನ್ನುಳಿದಂತೆ ಗ್ಲೇನ್ ಮ್ಯಾಕ್ಸ್ ವೆಲ್ ರಿಂದ ದೊಡ್ಡ ಇನ್ನಿಂಗ್ಸ್ ಮಿಸ್ ಆಗಿದೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಆರ್ ಸಿಬಿಯ ಸೆನ್ಸೇಷನಲ್ ಫರ್ಫಾಮೆನ್ಸ್ ಗೆ ಕಾರಣವಾಗಿದ್ದಾರೆ. ನಾಯಕ ಫಾಪ್ ಕಟ್ಟುವ ಇನ್ನಿಂಗ್ಸ್ ತಂಡಕ್ಕೆ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕುತ್ತಿದೆ. ಬೌಲಿಂಗ್ನಲ್ಲಿ ಹ್ಯಾಜಲ್ ವುಡ್ ಹೊಸ ಜೋಶ್ ತಂದಿದ್ದಾರೆ. ಸಿರಾಜ್ ದುಬಾರಿ ಆದರೂ ಬೇಕೇ ಬೇಕು. ಹರ್ಷಲ್ ಪಟೇಲ್ ಸೂಪರ್. ವನಿಂದು ಹಸರಂಗ ವಿಕೆಟ್ ಟೇಕರ್. 5ನೇ ಬೌಲರ್ ಸ್ಥಾನವನ್ನು ಶಹಬಾಸ್ ಮತ್ತು ಮ್ಯಾಕ್ಸ್ ವೆಲ್ ತುಂಬಬೇಕು.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿದೆ :
ಫಾಫ್ ಡುಪ್ಲಸಿಸ್
ವಿರಾಟ್ ಕೊಹ್ಲಿ / ಅನೂಜ್ ರಾವತ್
ಪಟಿದಾರ್ / ಮಹಿಪಾಲ್
ಗ್ಲೇನ್ ಮ್ಯಾಕ್ಸ್ ವೆಲ್
ಸುಯಾಶ್ ಪ್ರಭುದೇಸಾಯಿ
ಶಹಬ್ಬಾಸ್ ಅಹ್ಮದ್
ದಿನೇಶ್ ಕಾರ್ತಿಕ್
ವನಿಂದು ಹಸರಂಗ
ಹರ್ಷಲ್ ಪಟೇಲ್
ಜೋಶ್ ಹೆಜಲ್ ವುಡ್
ಮೊಹ್ಮದ್ ಸಿರಾಜ್
rcb-vs-srh-match-rcb-probable-xi