‘ನನಗೆ ಡ್ರಗ್ಸ್ ಕೊಟ್ಟಿದ್ದು ಸಾರಾ ಅಲಿ ಖಾನ್’ – ಸ್ಪೋಟಕ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ
ಮುಂಬೈ : ಸುಸಾಂತ್ ಸಿಂಗ್ ಸಾವಿನ ಪ್ರಕರಣದ ಮಿಸ್ಟರಿ ತನಿಖೆಯ ವೇಳೆ ಪ್ರಕರಣ ಡ್ರಗ್ಸ್ ಕೇಸ್ ಗೆ ತಿರುಗಿತ್ತು.. ಅನೇಕ ಸ್ಯಾಂಡಲ್ ವುಡ್ ಬಾಲಿವುಡ್ ತಾರೆಯರು ಸೆರೆವಾಸ ಅನುಭವಿಸಿ ಜಾಮೀನಿ ಮೇಲೆ ಹೊರಂಬಿದ್ದಾರೆ.. ಇನ್ನೂ ಹಲವರು , NCB , CCB ವಿಚಾರಣೆಯನ್ನೂ ಎದುರಿಸಿದ್ದಾರೆ.. ಈ ಕೇಸ್ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಹೆಸರುಗಳು ಬಲವಾಗಿ ಕೇಳಿಬಮದಿದ್ದು, ಆಲಿಯಾ ಭಟ್ , ದೀಪಿಕಾ ಪಡುಕೋಣೆ , ಸಾರಾ ಅಲಿಖಾನ್ ಹೆಸರುಗಳು ಸಹ ಕೇಳಿಬಂದಿದ್ದವು.. ಸುಸಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ..
ಇದೀಗ ಪ್ರಕರಣ ಸಂಬಂಧ ಸ್ಪೋಟಕ ಮಾಹಿತಿ ನೀಡಿದ್ದಾರೆ. ತಮಗೆ ಡ್ರಗ್ಸ್ ನೀಡಿದ್ದು ಸಾರಾ ಆಲಿ ಖಾನ್ ಎಂದಿದ್ದಾರೆ. ಹೌದು ಗಾಂಜಾ ಮತ್ತು ವೋಡ್ಕಾವನ್ನು ಅವರು ನನಗೆ ಕೊಟ್ಟಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಅವರು ಮಾದಕ ವಸ್ತು ನಿಯಂತ್ರಣ ಬ್ಯೂರೋದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಸಾರಾ ಅವರು ಗಾಂಜಾವನ್ನು ಸುರುಳಿ ಸುತ್ತಿದ ಡೂಡಿಯೊಳಗಿಟ್ಟು ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಸಾರಾ ಅವರನ್ನೂ ಎನ್ಸಿಬಿ ಕರೆಸಿ ವಿಚಾರಣೆ ನಡೆಸಿತ್ತು. ಸಾರಾ ಮತ್ತು ಸುಶಾಂತ್ ಥೈಲ್ಯಾಂಡ್ ಪ್ರವಾಸ ಹೋಗಿದ್ದು, ಡೇಟಿಂಗ್ ನಡೆಸಿದ್ದ ಬಗ್ಗೆಯೂ ಅವರು ವಿವರಿಸಿದ್ದರು. ಸದ್ಯ ರಿಯಾ ಈಗ ನೀಡಿರುವ ಹೇಳಿಕೆಯಿಂದ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.