ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt Mantralaya) 26 ದಿನಗಳಲ್ಲಿ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಡಿಸೆಂಬರ್ ತಿಂಗಳ (December) 26 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಬರೋಬ್ಬರಿ 2,95,74,004 ರೂ. ಸಂಗ್ರಹವಾಗಿದೆ. ಕಾಣಿಕೆಯಲ್ಲಿ 2, 89, 63,504 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6,10,500 ರೂ. ನಾಣ್ಯಗಳ ಸಂಗ್ರಹ ಆಗಿದೆ. 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.