ವುಹಾನ್ ಲ್ಯಾಬ್ ಕಾರ್ಮಿಕರ ವೈದ್ಯಕೀಯ ದಾಖಲೆ ಬಿಡುಗಡೆಗೆ ಡಾ. ಆಂಥೋನಿ ಫೌಸಿ ಆಗ್ರಹ

1 min read
Release Medical Records Of Wuhan Lab Workers

ವುಹಾನ್ ಲ್ಯಾಬ್ ಕಾರ್ಮಿಕರ ವೈದ್ಯಕೀಯ ದಾಖಲೆ ಬಿಡುಗಡೆಗೆ ಡಾ. ಆಂಥೋನಿ ಫೌಸಿ ಆಗ್ರಹ

ವುಹಾನ್ ಲ್ಯಾಬ್ ಕಾರ್ಮಿಕರ ವೈದ್ಯಕೀಯ ದಾಖಲೆಗಳನ್ನು ಬಿಡುಗಡೆ ಮಾಡಲು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಚೀನಾಕ್ಕೆ ಕರೆ ನೀಡಿರುವುದಾಗಿ ವರದಿಗಳು ತಿಳಿಸಿದೆ . ಇದರಿಂದ ಲ್ಯಾಬ್ ಸೋರಿಕೆಯ ಪರಿಣಾಮವಾಗಿ ಕೋವಿಡ್-19 ಹೊರಹೊಮ್ಮಿದೆಯೇ ಎಂಬ ಬಗ್ಗೆ ಪ್ರಮುಖ ಸುಳಿವುಗಳು ದೊರೆಯುವ ಸಾಧ್ಯತೆ ಇದೆ.
Release Medical Records Of Wuhan Lab Workers

2019 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ವರದಿಯಾದ ಮೂವರ ವೈದ್ಯಕೀಯ ದಾಖಲೆಗಳನ್ನು ನೋಡಲು ನಾನು ಬಯಸುತ್ತೇನೆ. ಅವರು ನಿಜವಾಗಿಯೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆಯೇ, ಹಾಗಿದ್ದಲ್ಲಿ, ಅವರು ಯಾವ ಅನಾರೋಗ್ಯಕ್ಕೆ ಒಳಗಾಗಿದ್ದರು? ಎಂದು ಫೌಸಿ ಪ್ರಶ್ನಿಸಿರುವುದನ್ನು ವರದಿ ಉಲ್ಲೇಖಿಸಿದೆ.

ಆಮೆರಿಕ ಗುಪ್ತಚರ ಸಂಸ್ಥೆಗಳು ವುಹಾನ್‌ನ ಚೀನೀ ವೈರಾಲಜಿ ಪ್ರಯೋಗಾಲಯದ ಸಂಶೋಧಕರು 2019 ರಲ್ಲಿ ಮೊದಲ ಕೊವಿಡ್-19 ಪ್ರಕರಣಗಳು ವರದಿಯಾಗುವುದಕ್ಕೆ ಒಂದು ತಿಂಗಳ ಮೊದಲು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂಬ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ.

ಆದಾಗ್ಯೂ, ಚೀನಾದ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಲ್ಯಾಬ್ ಸೋರಿಕೆ ವರದಿಗಳನ್ನು ತಿರಸ್ಕರಿಸಿದ್ದಾರೆ. ಕೊರೋನಾ ವೈರಸ್ ಇತರ ಪ್ರದೇಶಗಳಿಂದ ಹರಡಿರಬಹುದು ಮತ್ತು ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರ ಸಾಗಣೆ ಅಥವಾ ವನ್ಯಜೀವಿ ವ್ಯಾಪಾರದ ಮೂಲಕ ಚೀನಾವನ್ನು ಪ್ರವೇಶಿಸಿರಬಹುದು ಎಂದು ಚೀನಾ ತಿಳಿಸಿದೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#MedicalRecords #WuhanLab

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd