ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಹೊಸ ಆಫರ್ಗೆ ಇತರ ಟೆಲಿಕಾಂ ಕಂಪನಿಗಳು ಶಾಕ್ ಆಗಿವೆ. ಹೊಸ ಪ್ಲಾನ್ನಲ್ಲಿ ಪ್ರತಿ ದಿನ 2GB 5G ಡೇಟಾ, ಅನ್ಲಿಮಿಟೆಡ್ ಕಾಲ್, ಹಾಗೂ ಹಲವು ಪಾಪ್ಯುಲರ್ ಚಾನೆಲ್ಗಳ ಸಬ್ಸ್ಕ್ರಿಪ್ಶನ್ ನೀಡಲಾಗುತ್ತಿದೆ.
445 ರೂಪಾಯಿ ಪ್ಲಾನ್ ಡೀಟೈಲ್ಸ್:
ಪ್ರತಿ ದಿನ 2GB 5G ಡೇಟಾ
ಅನ್ಲಿಮಿಟೆಡ್ ಕರೆ ಸೌಲಭ್ಯ
ಪ್ರತಿ ದಿನ 100 ಎಸ್ಎಂಎಸ್ ಉಚಿತ
ಝೀ5, ಸೋನಿ LIV, ಡಿಸ್ಕವರಿ ಪ್ಲಸ್, ಸನ್ NXT, ಸೇರಿದಂತೆ ಹಲವು ಓಟಿಟಿ ಪ್ಲಾಟ್ಫಾರ್ಮ್ಗಳ ಸಬ್ಸ್ಕ್ರಿಪ್ಶನ್ಗಳು ಲಭ್ಯ.
ಪ್ಲಾನ್ ವ್ಯಾಲಿಡಿಟಿ: 28 ದಿನಗಳು
ಈ ಪ್ಲಾನ್ಗಿಂತ ಕಡಿಮೆ ಬೆಲೆಯಲ್ಲಿ ಇಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡುವುದು ಗ್ರಾಹಕರಿಗೆ ದೊಡ್ಡ ಬೂಸ್ಟರ್ ಆಗಿದೆ. ಪ್ರತ್ಯೇಕವಾಗಿ ಡೇಟಾ, ಕಾಲ್ ಮತ್ತು ಮನೋರಂಜನೆಗೆ ಪ್ಲಾನ್ ತೆಗೆದುಕೊಳ್ಳಬೇಕಾದ ಅಗತ್ಯ ಇಲ್ಲ. ತ್ರಿ ಇನ್ ಒನ್ ಪ್ಯಾಕ್ ಅನ್ನು ಬಳಸಿಕೊಂಡು, ಯೂಸರ್ಗಳು ಸುಲಭವಾಗಿ ಎಲ್ಲವನ್ನೂ ನಿರ್ವಹಿಸಬಹುದು.
ಇದು ಈ ಹಿಂದಿನ ಪ್ಲಾನ್ಗಳಿಗಿಂತ ದೊಡ್ಡ ಮಾರಾಟ ತಂತ್ರವಾಗಿದ್ದು, ಮುಂಬರುವ ದಿನಗಳಲ್ಲಿ ಇತರ ಕಂಪನಿಗಳಿಗೂ ಪೈಪೋಟಿ ನೀಡಲಿದೆ.