ಕೊಚ್ಚಿ : ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ನಿಧನರಾಗಿದ್ದಾರೆ.
ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ಸಾವನ್ನಪ್ಪಿದ್ದಾರೆ. ಭಾರತ ಸಿನಿಮಾರಂಗದ ಖ್ಯಾತ ನಟರಾಗಿರುವ ಮಮ್ಮುಟ್ಟಿ ಅವರ ತಾಯಿ ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವರದಿಯ ಪ್ರಕಾರ ಶುಕ್ರವಾರ ಸಂಜೆ ಕೊಟ್ಟಾಯಂನ ಚೆಂಪುವಿನ ಅವರ ಹುಟ್ಟೂರಲ್ಲಿ ದಫನ ಕಾರ್ಯ ನಡೆಯಲಿದೆ.
ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. ಮಮ್ಮುಟ್ಟಿ ಈ ಪೈಕಿ ಹಿರಿಯ ಪುತ್ರನಾಗಿದ್ದಾರೆ. ತಾಯಿಯ ನಿಧನಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.