Renukacharya | ಯಾವತ್ತೂ ಮುಸ್ಲೀಮರಿಗೆ ಸಿಎಂ ಆಗೋದಕ್ಕೆ ಬಿಡೋದಿಲ್ಲ
ಬೆಂಗಳೂರು : ಕರ್ನಾಟಕದಲ್ಲಿ ಯಾವತ್ತಿದ್ರೂ ಹಿಂದೂಗಳೇ ಸಿಎಂ ಆಗಿರಬೇಕು. ಯಾವತ್ತೂ ಮುಸ್ಲೀಮರಿಗೆ ಸಿಎಂ ಆಗೋದಕ್ಕೆ ಬಿಡೋದಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಎಲ್ಲಿ ಹೋದ್ರೂ ಮುಸ್ಲಿಮರು ಜಾಸ್ತಿ ಇದ್ದೀವಿ ಅಂತಾರೆ. ಕರ್ನಾಟಕದಲ್ಲಿ ಯಾವತ್ತಿದ್ರೂ ಹಿಂದೂಗಳೇ ಸಿಎಂ ಆಗಿರಬೇಕು. ಯಾವತ್ತೂ ಮುಸ್ಲೀಮರಿಗೆ ಸಿಎಂ ಆಗೋದಕ್ಕೆ ಬಿಡೋದಿಲ್ಲ. ಇದು ಹಿಂದೂಗಳು ಹೆಚ್ಚಾಗಿರುವ ದೇಶ ಹಿಂದೂಗಳೆ ಸಿಎಂ ಆಗಿರಬೇಕು. ಹಿಂದು ಮುಸ್ಲಿಂ ನಡುವೆ ಕೋಮು ಭಾವನೆ ಕೆರಳಿಸುತ್ತೀದ್ದೀರಿ ಜಮೀರ್. ಜಮೀರ್ ಇದನ್ನು ಇಲ್ಲಿಗೇ ಬಿಟ್ಟುಬಿಡಬೇಕು ಎಂದು ಹೇಳಿದ್ರು.

ಇದೇ ವೇಳೆ ಬಿಜೆಪಿ ಕಾರ್ಯಕರ್ತ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಎಲ್ಲೋ ಒಂದು ಕಡೆ ನಮಗೆ ನೋವಾಗ್ತಿದೆ. ಹರ್ಷ, ಚಂದ್ರು ಆಯ್ತು, ನಿನ್ನೆ ಪ್ರವೀಣ್ ಹೀಗೆ ನಿರಂತರವಾಗಿ ಹತ್ಯೆ ನಡೆಯುತ್ತಿದೆ. ಹಿಂದೂ ಸಂಘಟನೆ, ನಮ್ಮ ಕಾರ್ಯಕರ್ತರು ಟಾರ್ಗೆಟ್ ಆಗಿದ್ದಾರೆ. ಇದರ ಅಂತ್ಯ ಯಾವಾಗ ಎಂದು ಪ್ರಶ್ನಿಸಿದರು.
ಯು.ಪಿ ಸಿಎಂ ಆದಿತ್ಯನಾಥ್ ಮಾದರಿಯಲ್ಲಿ ಇವರನ್ನ ಹದುಬಸ್ತಿನಲ್ಲಿಇಡಬೇಕು. ನಿರಂತರವಾಗಿ ಹತ್ಯೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇದನ್ನ ಗಂಭೀರವಾಗಿ ಪರಿಗಣಿಸ್ತಾರೆ. ಕಾಂಗ್ರೆಸ್ ಕಾಲದಲ್ಲಿ 10-15ಜನರ ಹತ್ಯೆ ಆಗ್ತಿತ್ತು. ಈಗ ಕಂಟ್ರೋಲ್ ಆಗಿದೆ. ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡ್ತೀವಿ. ನನಗೆ ಬೆದರಿಕೆ ಕರೆ ಬಂದಿತ್ತು, ಆರೋಪಿಗಳನ್ನ ಪತ್ತೆ ಹಚ್ಚಲಾಗಿಲ್ಲ. ನನ್ನಂತವರಿಗೆ ಹೀಗಾದ್ರೆ ಹೇಗೆ, ನಾನೇನು ಹೆದರಲ್ಲ. ನಾನು ಸಾವಿರಾರು ಜನರ ಮದ್ಯೆ ಇರ್ತೇನೆ. ಹೊನ್ನಾಳಿಯಲ್ಲಿ ಮಾರಿಕಾಂಬಾ ಉತ್ಸವದಲ್ಲಿ ಇದ್ದೆ. ಹೊನ್ನಾಳಿ ಯುವಕರು ನನಗೆ ಬೆಂಗಾವಲಾಗಿದ್ರು. ನನಗೆ ಹೀಗಾದ್ರೆ, ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.








