ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕೋರ್ಟ್ ಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 24ನೇ ಎಸಿಎಂಎಂ ಕೋರ್ಟ್ಗೆ ಸುಮಾರು 3,991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಎಸ್ಪಿಪಿ ಮೂಲಕ ತನಿಖಾಧಿಕಾರಿಗಳು ಚಾರಹ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 231 ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ. 24ನೇ ಎಸಿಎಂಎಂ ಕೋರ್ಟ್ನ ಜಡ್ಜ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ.
ಇದಕ್ಕೂ ಮುನ್ನ ಪ್ರಕರಣದಲ್ಲಿ ದರ್ಶನ್ ಎ1 ಆರೋಪಿಯಾಗಬಹುದು ಎಂದು ಹೇಳಲಾಗಿತ್ತು. ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದಾರೆ. ಒಟ್ಟು ಮೂರೂ ಮಂದಿ ಪ್ರತ್ಯಕ್ಷ ಸಾಕ್ಷಿದಾರರು ಪ್ರಕರಣದಲ್ಲಿದ್ದಾರೆ. 8 ಎಫ್ಎಸ್ಎಸಲ್-ಸಿಎಸ್ಎಫ್ಎಲ್ ವರದಿಗಳು ಚಾರ್ಜ್ಶೀಟ್ ನಲ್ಲಿವೆ.
54 ಪಂಚರ ಸಕ್ಷಮ ಪೊಲೀಸರು ಮಹಜರು ಮಾಡಿದ್ದಾರೆ. ಒಟ್ಟು 231 ಸಾಕ್ಷಿಗಳು ಪ್ರಕರಣದಲ್ಲಿದ್ದು, 27 ಸಾಕ್ಷಿಗಳು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ದಾಖಲು ಮಾಡಿದ್ದಾರೆ. ಒಟ್ಟು ಏಳು ಸಂಪುಟಗಳು ಒಟ್ಟು 10 ಕಡತಗಳಿರುವ ಚಾರ್ಜ್ಶೀಟ್ ಇದಾಗಿದೆ. 28 ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. 17 ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಲಾಠಿ, ಮರದ ಪೀಸ್, ಸಿಸಿಟಿವಿ ದೃಶ್ಯ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸೀಜ್ ಮಾಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾಗೇಶ್ ಅವರಿಂದ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. 164 ಅಡಿಯಲ್ಲಿ 27 ಮಂದಿ ಸಾಕ್ಷಿದಾರರ ಹೇಳಿಕೆ ದಾಖಲಾಗಿದ್ದರೆ, 161 ಅಡಿಯಲ್ಲಿ 70 ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖಿಲಸಾಗಿದೆ. 56 ಜನ ಪೊಲೀಸರು ಸೇರಿ 231 ಸಾಕ್ಷಿಯನ್ನು ಕಲೆಹಾಕಲಾಗಿದೆ.
ಹಲ್ಲೆ ವೇಳೆ ರೇಣುಕಾಸ್ವಾಮಿ ಬೇಡಿಕೊಳ್ಳುವ ಪೋಟೋ ರಿಟ್ರೀವ್ ಆಗಿದೆ. ವಿನಯ್ ಮೊಬೈಲ್ ಈ ಫೋಟೋ ರಿಟ್ರೀವ್ ಆಗಿದೆ. ಅನುಕುಮಾರ್ ಮೊಬೈಲ್ ನಿಂದ ಆಡಿಯೋವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ರೇಣುಕಾಸ್ವಾಮಿ ಹಲ್ಲೆ ಮಾಡುವಾಗ ಕ್ಲಿಕ್ಕಿಸಿದ್ದ ಹಲವು ಪೋಟೋಗಳು ಸಿಕ್ಕಿವೆ. ಪೊಲೀಸ್ ಲಾಠಿ ಮುಂಬದಿ ಪುಡಿ ಪುಡಿಯಾಗಿರೋ ಫೋಟೋ ಕೂಡ ಸಿಕ್ಕಿದೆ. ನೈಲನ್ ಹಗ್ಗದ ಫೋಟೊವನ್ನೂ ಕೂಡ ಸಂಗ್ರಹಿಸಲಾಗಿದೆ. ಪವಿತ್ರಗೌಡ ಚಪ್ಪಲಿಯ ಫೋಟೊ ಕೂಡ ಆರೋಪ ಪಟ್ಟಿಯಲ್ಲಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ನಂದೀಶ್ ನಾಗರಾಜ್. ದರ್ಶನ್ ಸ್ಟೋನಿ ಬ್ರೂಕ್ ಹೊಟೆಲ್ ನಿಂದ ಹೊರ ಬರುವ ಪೋಟೋಗಳು ಸೇರಿದಂತೆ ಹಲವು ಸಾಕ್ಷಿಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.