ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೊಲೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ಜೈಲಿನಲ್ಲಿದೆ. ಈ ಮಧ್ಯೆ ಎಫ್ ಎಸ್ ಎಲ್ ವರದಿ ಪೊಲೀಸರ ಕೈಗೆ ಸಿಕ್ಕಿದ್ದು, ದರ್ಶನ್ ಆಂಡ್ ತಂಡಕ್ಕೆ ಆತಂಕ ಶುವಾಗಿದೆ.
ಹೀಗಾಗಿ ಈಗ ಪ್ರಕರಣ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರು ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಈಗ ಬಿಯರ್ ಬಾಟಲಿ ಮೇಲೆ ರಕ್ತದ ಕಲೆ ಪತ್ತೆಯಾಗಿದೆ ಎನ್ನಲಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ನಂತರ ಆರೋಪಿಗಳು ಅಲ್ಲೇ ಪಾರ್ಟಿ ಮಾಡಿ ಖುಷ್ಕ ತಿಂದಿದ್ದರು. ಇದರಲ್ಲಿ ಒಂದು ಬಿಯರ್ ಬಾಟಲಿ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಆರೋಪಿಯೊಬ್ಬನ ಫಿಂಗರ್ ಪ್ರಿಂಟ್ ಕೂಡ ಇದ್ದು, ತನಿಖೆ ನಡೆಯುತ್ತಿದೆ.
ಬಿಯರ್ ಬಾಟಲಿಯನ್ನು ಪ್ರಮುಖ ಸಾಕ್ಷಿಯಾಗಿ ಮಾಡಿರುವ ಪೊಲೀಸರು, ಹೆಚ್ಚಿನ ಸಾಕ್ಷಿಗಳ ಹುಡುಕಾಟದಲ್ಲಿದ್ದಾರೆ.