ರೇಣುಕಾಸ್ವಾಮಿ ಕುಟುಂಬಸ್ಥರನ್ನು ವಿನೋದ್ ರಾಜ್ (Vinod Raj) ಭೇಟಿ ಮಾಡಿ ಲೀಲಾವತಿ (Leelavathi) ಹೆಸರಿನಲ್ಲಿ 1 ಲಕ್ಷ ರೂ. ನೆರವು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬ ಕಂಡರೆ ಕರಳು ಹಿಂಡಿದಂತಾಗುತ್ತದೆ. ಮನೆಯ ಆಧಾರ ಸ್ತಂಭವಾಗಿದ್ದ ರೇಣುಕಾಸ್ವಾಮಿ ಕಳೆದುಕೊಂಡು ಕುಟುಂಬ ಪರಿತಪಿಸುತ್ತಿದೆ. ಇವರ ಸ್ಥಿತಿ ಕಂಡು ಕರುಳು ಕಿತ್ತು ಬರುತ್ತದೆ. ನಾವು ಮನುಷ್ಯರಾಗಿದ್ದೀವಾ ಅಂತ ಎಂದು ಚಿಂತಿಸುವ ಕಾಲ ಬಂದಿದೆ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಜೀವಿಗೂ ಭೂಮಿಯಲ್ಲಿ ಬದುಕುವ ಹಕ್ಕು ಇದೆ. ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುತ್ತದೆ. ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಂಡು ಪ್ರತಿಯೊಬ್ಬರೂ ಬದುಕು ಸಾಗಿಸಬೇಕು ಎಂದು ಹೇಳಿದ್ದಾರೆ.
ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಇದು ಆಘಾತಕಾರಿ ವಿಷಯವಾಗಿದೆ. ಹೆಸರು, ಕೀರ್ತಿಯಲ್ಲಿರುವ ನಾವು ಎಂದಿಗೂ ಎಚ್ಚರವಾಗಿರಬೇಕು. ಜನ ಕಲಾವಿದರನ್ನು ಹೆಚ್ಚು ಅನುಸರಿಸುತ್ತಾರೆ. ಯಾರದ್ದೇ ತಪ್ಪಾಗಿದ್ದರು ಶಿಕ್ಷೆಯಾಗಲಿ. ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ಹೇಳಿದ್ದಾರೆ.








