ನವದೆಹಲಿ: ನಾಯಕ ರಾಹುಲ್ ಗಾಂಧಿ ಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಹಾರದ ಭೋಜ್ಪುರದಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯನ್ನು (Lok Sabha Election Rally) ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ನಡೆಸಲಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಜಗತ್ತಿನಲ್ಲಿ ಕೇವಲ 2 ಜಾತಿಗಳಿವೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮನ್ನು ಒಬಿಸಿ ಎಂದು ಏಕೆ ಗುರುತಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮೋದಿ ಅವರ ಪ್ರಕಾರ ದೇಶದಲ್ಲಿ ಶ್ರೀಮಂತರು ಹಾಗೂ ಬಡವರು ಎಂಬ ಎರಡು ಜಾತಿಗಳಿವೆ. ಈ ಎರಡೇ ಜಾತಿಗಳಿದ್ದರೆ ನರೇಂದ್ರ ಮೋದಿ ಹೇಗೆ ಒಬಿಸಿ ಆದರು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಭಾರತ ದೇಶದಲ್ಲಿ ಶೇ.50ರಷ್ಟು ಜನಸಂಖ್ಯೆ ಹಿಂದುಳಿದವರು, ಶೇ.15ರಷ್ಟು ದಲಿತರು, ಶೇ.8ರಷ್ಟು ಆದಿವಾಸಿಗಳು ಇದ್ದಾರೆ ಎಂಬುವುದು ದೇಶಕ್ಕೆ ತಿಳಿಯಬೇಕು. ನಾವೂ ಕೂಡ ಆರ್ಥಿಕ ಸಮೀಕ್ಷೆ ನಡೆಯಬೇಕು ಎಂದು ಹೇಳಿದ್ದೆವು ಎಂದು ಹೇಳಿದ್ದಾರೆ.