ಬಿಜೆಪಿಯ (BJP) ಹಿರಿಯ ನಾಯಕ ಎಲ್.ಕೆ. ಅಡ್ವಾಣಿ (LK Advani)ಗೆ ಶನಿವಾರ ಭಾರತ ರತ್ನ ಪ್ರಶಸ್ತಿ (Bharat Ratna) ಘೋಷಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಡ್ವಾಣಿ, ಇದು ವ್ಯಕ್ತಿ ಅಲ್ಲದೇ, ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವವಾಗಿದೆ. ‘ಭಾರತ ರತ್ನ’ವನ್ನು ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ನಾನು ಸ್ವೀಕರಿಸುತ್ತೇನೆ. ಇದು ಒಬ್ಬ ವ್ಯಕ್ತಿಯಾಗಿ ನನಗೆ ಮಾತ್ರವಲ್ಲ, ನನ್ನ ಆದರ್ಶಗಳು ಹಾಗೂ ತತ್ವಗಳಿಗೆ ಇದು ಸಿಕ್ಕ ಗೌರವ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲಿದ್ದೇನೆ.
ಸ್ವಯಂಸೇವಕನಾಗಿ ಜೀವನದಲ್ಲಿ ನನಗೆ ನಿಯೋಜಿಸಲಾದ ಯಾವುದೇ ಕಾರ್ಯದಲ್ಲಿ ಪ್ರೀತಿಯ ದೇಶದ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆಯಲ್ಲಿ ಮಾತ್ರ ಪ್ರತಿಫಲ ಬಯಸಿದೆ ಎಂದು ಹೇಳಿದ್ದಾರೆ.