ಉಸಿರಾಟದ ತೊಂದರೆ ಕೆಮ್ಮು, ನೆಗಡಿ : ರಾಜ್ಯದಲ್ಲಿ ವೈರಲ್ ಇನ್ಫೆಕ್ಷನ್
ಬೆಂಗಳೂರು : ರಾಜ್ಯದಾದ್ಯಂತ ಕೊರೊನಾ ವೈರಸ್ ನ ಕಾಟದ ಮಧ್ಯೆ ಇದೀಗ ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಂಡಿದೆ.
ಮಕ್ಕಳಲ್ಲಿ ಹೆಚ್ಚಾಗಿ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಇದೇ ವೈರಲ್ ಜ್ವರದ ಲಕ್ಷಣಗಳು ಎಂದು ಹೇಳಲಾಗುತ್ತಿದೆ.
ಇನ್ನು ಆತಂಕಕಾರಿ ವಿಚಾರ ಏನಂದರೇ ಈ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರತಿ 100 ಮಕ್ಕಳ ಪೈಕಿ 50 ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 100 ಮಕ್ಕಳಲ್ಲಿ 25ರಿಂದ 30 ಮಕ್ಕಳಿಗೆ ಆಕ್ಸಿಜನ್ ಬೆಡ್ ಬೇಡಿಕೆ ಇದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈರಲ್ ಜ್ವರದ ಕೇಸ್ ಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳತ್ತ ಜನರು ದೌಡಾಯಿಸುತ್ತಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿದ್ದು, ಬೆಡ್ ಸಮಸ್ಯೆ ಕೂಡ ಉಂಟಾಗಿದೆ.