ಗಲ್ವಾನ್ ಘರ್ಷಣೆ ಕುರಿತು ಟ್ವೀಟ್ – ನಟಿ ರಿಚಾ ಚಡ್ಡಾ ಕ್ಷಮೆಯಾಚನೆ…
ಗಲ್ವಾನ್ ಘರ್ಷಣೆಯಲ್ಲಿ ಭಾರತೀಯ ಸೇನಾ ಯೋಧರು ಸಾವನ್ನಪ್ಪಿರುವ ಕುರಿತು ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಟೀಕೆಗೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆ ಪ್ರತಿಕ್ರಿಯಿಸಿದ್ದ ರಿಚಾ… ಟ್ವೀಟರ್ ಮೂಲಕ “ ಗಲ್ವಾನ್ ಹಾಯ್ ಹೇಳುತ್ತದೆ.. “Galwan says hi.” ಎಂದು ಟ್ವೀಟರ್ ಮಾಡಿದ್ದಾರೆ.
ಈ ಟ್ವೀಟ್ ಮಾಡಿದ ತಕ್ಷಣ ಟ್ವೀಟ್ ವೈರಲ್ ಆಗಿದ್ದು, ಸೇನೆಯನ್ನ ಅವಮಾನಿಸದ್ದಾರೆ ಎಂದಿ ರಿಚಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ದೇಶಪ್ರೇಮಿಗಳು ಬಿಜಿಪಿಯ ಹಲವರು ನಾಯಕರು ಕಟು ಟೀಕೆ ಮಾಡಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಬಾಲಿವುಡ್ ನಿಂದ ಬಹಿಷ್ಕರಿಸ ಬೇಕು ಎಂದು ಹೇಳಿದ್ದಾರೆ.
ಟೀಕೆಗಳು ಹೆಚ್ಚಾಗುತ್ತಿದ್ದಂತೆ ನಟಿ ರಿಚಾ ಚಡ್ಡಾ ಕ್ಷಮೆ ಕೇಳಿ ಟ್ವೀಟ್ ಮಾಡಿದ್ದಾರೆ. “ಇದು ನನ್ನ ಉದ್ದೇಶವಾಗಿರಲು ಸಾಧ್ಯವಿಲ್ಲದಿದ್ದರೂ, ವಿವಾದಕ್ಕೆ ಎಳೆಯುತ್ತಿರುವ 3 ಪದಗಳು ಯಾರನ್ನಾದರೂ ನೋಯಿಸಿದರೆ ನಾನು ಕ್ಷಮೆಯಾಚಿಸುತ್ತೇನೆ.
ನನ್ನ ಸ್ವಂತ ನಾನಾಜಿ ಅವರು ಸೇನೆಯ ಭಾಗವಾಗಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿ, ಅವರು 1960 ರ ದಶಕದಲ್ಲಿ ಇಂಡೋ-ಚೀನಾ ಯುದ್ಧದಲ್ಲಿ ಕಾಲಿಗೆ ಗುಂಡೇಟು ಹೊತ್ತು ಬಂದಿದ್ದರು. ನನ್ನ ಮಾಮಾಜಿ ಒಬ್ಬ ಪ್ಯಾರಾಟ್ರೂಪರ್ ಆಗಿದ್ದರು. ಅದು ನನ್ನ ರಕ್ತದಲ್ಲಿದೆ.” ಎಂದು ಟ್ವೀಟ್ ಮಾಡಿದ್ದಾರೆ.
Richa Chadha apologises after being trolled for tweet on Galwan clash