ಸೆಂಚೂರಿಯನ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ದಕ್ಷಿಣ ಆಫ್ರಿಕಾ (South Africa) ತಂಡ ಭಾರತದ ಮೇಲೆ ಸವಾರಿ ಮಾಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಆಫ್ರಿಕಾ ತಂಡ 11 ರನ್ ಗಳ ಮೇಲುಗೈ ಸಾಧಿಸಿದೆ.
ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಸರ್ವಪತನ ಕಂಡಿತ್ತು. ಆದರೆ, ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 256 ರನ್‌ಗಳಿಸಿ 11 ರನ್ ಗಳ ಲೀಡ್ ಪಡೆದು, ಬ್ಯಾಟಿಂಗ್ ಮುಂದುವರೆಸಿದೆ. ಈ ಪಂದ್ಯದ ಮೂಲಕ ವಿದಾಯ ಹೇಳಲು ಮುಂದಾಗಿದ್ದ ಡೀನ್ ಎಲ್ಗರ್ ಶತಕ ಸಿಡಿಸಿದ್ದಾರೆ. ಈ ಮೂಲಕ ಎಲೈಟ್ ಲಿಸ್ಟ್ ಸೇರಿದ್ದಾರೆ.
ಅವರು ಆರಂಭಿಕರಾಗಿ ಕಣಕ್ಕೆ ಇಳಿದು ಔಟ್ ಆಗದೆ 140 ರನ್ (211 ಎಸೆತ, 23 ಬೌಂಡರಿ) ಸಿಡಿಸಿದ್ದಾರೆ. ಈ ಮೂಲಕ ಅವರು ದಿಗ್ಗಜರಾದ ಗ್ಯಾರಿ ಕರ್ಸ್ಟನ್ ಮತ್ತು ಹರ್ಷಲ್ ಗಿಬ್ಸ್ ಬಳಿಕ ತವರಿನಲ್ಲಿ ಭಾರತದ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಮೂರನೇ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾಗಿದ್ದಾರೆ.
ಅಲ್ಲದೇ, ಡೇವಿಡ್ ಬೆಡಿಂಗ್ಹ್ಯಾಮ್ 56, ಟೋನಿ ಡಿ ಜೋರ್ಜಿ 28 ರನ್ ಗಳಿಸಿದ್ದಾರೆ. ಭಾರತದ ಪರ ಬುಮ್ರಾ ಹಾಗೂ ಸಿರಾಜ್ ತಲಾ 2 ವಿಕೆಟ್ ಪಡೆದರೆ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದು ಮಿಂಚಿದ್ದಾರೆ. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ಆಡಿದ್ದ ಆಭಾರತ 245 ರನ್ ಗಳಿಸಿತ್ತು. ಭಾರತದ ಪರ ಕೆ.ಎಲ್. ರಾಹುಲ್ ಶತಕ ಸಿಡಿಸಿದ್ದರು.