ಭಾರತೀಯ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರಿಂಕು ಸಿಂಗ್ ಟಿ20 ಶ್ರೇಯಾಂಕದಲ್ಲಿ ಭಾರೀ ಮುಂಬಡ್ತಿ ಪಡೆದಿದ್ದಾರೆ.
ರಿಂಕು ಸಿಂಗ್ ಸದ್ಯ ಬರೋಬ್ಬರಿ 39 ಸ್ಥಾನಗಳ ಜಿಗಿತ ಕಂಡಿದ್ದಾರೆ. ಸದ್ಯ ಅವರು 548 ರೇಟಿಂಗ್ ಅಂಕಗಳೊಂದಿಗೆ 31ನೇ ಸ್ಥಾನಕ್ಕೆ ಏರಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಭರ್ಜರಿ ಲಾಭ ಪಡೆದಿದ್ದು, ಬರೋಬ್ಬರಿ 19 ಸ್ಥಾನ ಮೇಲೇರಿ 49ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ವಿರಾಟ್ ಕೊಹ್ಲಿ 2 ಸ್ಥಾನ ಕಳೆದುಕೊಂಡು 46ನೇ ಸ್ಥಾನಕ್ಕೆ ಕುಸಿದಿದ್ದಾರೆ.
26ರ ಹರೆಯದ ರಿಂಕು ಕಳೆದ ವರ್ಷ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶ ಪಡೆದಿದ್ದರು. ನಂತರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಪಡೆದು, ಭರ್ಜರಿ ಪ್ರದರ್ಶನ ತೋರಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರಿಂಕು ಅಮೋಘ ಪ್ರದರ್ಶನ ಕೂಡ ನೀಡಿದ್ದರು. ಇಲ್ಲಿಯವರೆಗೆ ರಿಂಕು ಸಿಂಗ್ ಇಂಡಿಯಾ ಪರ 15 ಟಿ20 ಹಾಗೂ 2 ಏಕದಿನ ಪಂದ್ಯ ಆಡಿದ್ದಾರೆ. ಟಿ20ಯಲ್ಲಿ ಅವರು 89.00 ಸರಾಸರಿ ಮತ್ತು 176.23 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕ ಸಹಿತ 356 ರನ್ ಗಳಿಸಿದ್ದಾರೆ. ಏಕದಿನದಲ್ಲಿ 27.50 ಸರಾಸರಿಯಲ್ಲಿ 55 ರನ್ ಗಳಿಸಿ ಎ ತಂಡದ ಭಾಗವಾಗಿದ್ದಾರೆ.